ಭಾರತದ ಸಂಪ್ರದಾಯಿಕ ಜ್ಞಾನ ಮತ್ತು ದೇಶದ ವಿಜ್ಞಾನಿಗಳು ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ – ಸಚಿವ ಹರ್ಷವರ್ಧನ್

ಹೈದರಾಬಾದ್, ಮಾ.26-ಭಾರತದ ಸಂಪ್ರದಾಯಿಕ ಜ್ಞಾನ ಮತ್ತು ದೇಶದ ವಿಜ್ಞಾನಿಗಳು ಸಮಾಜಕ್ಕೆ ಮೌಲ್ಯಯುತ ಕೊಡುಗೆ ನೀಡಿದ್ದಾರೆ ಎಂದು ಕೇಂದ್ರ ವಿಜ್ಞಾನ ಸಚಿವ ಹರ್ಷವರ್ಧನ್ ಪ್ರಶಂಸಿಸಿದ್ದಾರೆ. ಹೈದರಾಬಾದ್‍ನಲ್ಲಿ ಏಕಲವ್ಯ ಫೌಂಡೇಷನ್ ಮತ್ತಿತರ ಸಂಘಟನೆಗಳು ಏರ್ಪಡಿಸಿದ್ದ ಭೂಮಿ ಸುಪೆÇೀಷಣ್-ಸುಸ್ಥಿರ ಕೃಷಿಗಾಗಿ ಮಣ್ಣು ಸಮೃದ್ಧಿ-ಫಲವತ್ತತೆಗಾಗಿ ನವೀನ ವಿಧಾನ ಮತ್ತು ಅಭ್ಯಾಸಗಳು ಕುರಿತ ರಾಷ್ಟ್ರೀಯ ಸಮಾವೇಶದಲ್ಲಿ ಸಚಿವರು ಮಾತನಾಡಿದರು.
ನಾವು ಕೆಲವೊಮ್ಮೆ ನಮ್ಮ ದೇಶದ ಹಿರಿಮೆ ಮತ್ತ ಪ್ರಾಚೀನ ಜ್ಞಾನದ ಅನುಭವ ಹೊಂದಲು ಹಿಂದೇಟು ಹಾಕುತ್ತೇವೆ. ಆದರೆ ವಿದೇಶಿಯರು ನಮ್ಮ ದೇಶದ ಇಂಥ ಜ್ಞಾನದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ಧಾರೆ ಎಂದು ಸಚಿವರು ಹೇಳಿದರು. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಪರಿಣಾಮಕಾರಿ ಮಾರ್ಗ ಎಂಬ ಬಗ್ಗೆ ಬಹು ಹಿಂದೆಯೇ ಪತಂಜಲಿ ಯೋಗ ಬಣ್ಣಿಸಿದೆ. ಇದನ್ನೇ ಈಗ ಅಂತಾರಾಷ್ಟ್ರೀಯ ಮಟ್ಟಗಳಲ್ಲಿ ಅನುಸರಿಸಲಾಗುತ್ತಿದ್ದು, ಲೋಕಪ್ರಿಯತೆ ಪಡೆದಿದೆ ಎಂದು ಹರ್ಷವರ್ಧನ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ