ನಾಗರಿಕ ಹಕ್ಕು , ಮಹಿಳಾ ಸುರಕ್ಷತೆ ಬಗ್ಗೆ ಸಮಗ್ರ ನೀತಿ ರೂಪಿಸುವಂತೆ ಕಾಂಗ್ರೆಸ್ ಆಗ್ರಹ.

 

ಬೆಂಗಳೂರು, ಮಾ.26- ಅತ್ಯಾಚಾರ ವiತ್ತು ಮಹಿಳಾ ದೌರ್ಜನ್ಯದಲ್ಲಿ ಭಾಗಿಯಾಗುವ ಅಪರಾಧಿಗಳ ನಾಗರಿಕ ಹಕ್ಕು ಕಸಿದುಕೊಳ್ಳುವಂತಹ ಗಂಭೀರ ಕಾನೂನಿನ ಜೊತೆಗೆ, ಮಹಿಳಾ ಸುರಕ್ಷತೆ ಬಗ್ಗೆ ಸಮಗ್ರ ನೀತಿ ರೂಪಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ, ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ ಪೆÇ್ರ.ರಾಧಾಕೃಷ್ಣ ಮತ್ತಿತರರು, ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಬಹುಸಂಖ್ಯಾತದಲ್ಲಿದ್ದಾರೆ. ಅವರ ಮೇಲಿನ ದೌರ್ಜನ್ಯದಡಿ 100 ಕೇಸ್ ದಾಖಲಾದರೆ ಶೇ.3 ರಷ್ಟು ಮಾತ್ರ ನ್ಯಾಯಾಲಯದ ಮೆಟ್ಟಿಲೇರುತ್ತಿವೆ. ಉಳಿದವು ರಾಜಿ ಸಂಧಾನದಲ್ಲಿ ಇತ್ಯರ್ಥಗೊಳ್ಳುತ್ತವೆ. ಮಹಿಳಾ ದೌರ್ಜನ್ಯ ಅನ್ನೋದು ಯಾವುದೋ ಒಂದು ರಾಜ್ಯದ ಸಮಸ್ಯೆಯಲ್ಲ. ಅದು ರಾಷ್ಟ್ರದ ಸಮಸ್ಯೆ. ಈ ನಿಟ್ಟಿನಲ್ಲಿ ಮಹಿಳಾ ಸುರಕ್ಷತೆಗೆ ಕೇಂದ್ರ ರಾಷ್ಟ್ರೀಯ ನೀತಿ ಜಾರಿಗೆ ತರಬೇಕು ಎಂದರು.

ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರಗಳಲ್ಲಿದೆ. ಈ ರಾಜ್ಯಗಳಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿದೆ. ಕರ್ನಾಟಕ ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ 11ನೆ ಸ್ಥಾನದಲ್ಲಿದೆ. ಆದಾಗ್ಯೂ ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಬಿಜೆಪಿ ಪದೇ ಪದೇ ಟೀಕೆ ಮಾಡುತ್ತಿದೆ ಎಂದರು.
ಮೊದಲು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿನ ಕಾನೂನು ಸುವ್ಯವಸ್ಥೆ ಸರಿಪಡಿಸಿ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸಮಗ್ರ ಕಾನೂನು ಜಾರಿಗೊಳಿಸಬೇಕು. ಈ ಬಗ್ಗೆ ರಾಷ್ಟ್ರೀಯ ನೀತಿಯನ್ನು ತರಬೇಕು ಎಂದ ಅವರು ಎಷ್ಟು ದಿನಗಳಲ್ಲಿ ನೀತಿ ರೂಪಿಸಿ ಜಾರಿಗೊಳಿಸಲಾಗುವುದು ಎಂಬುದನ್ನು ಅಮಿತ್ ಷಾ ಅವರು ಬೆಂಗಳೂರಿಗೆ ಬಂದಾಗ ಹೇಳಬೇಕು ಎಂದು ಒತ್ತಾಯಿಸಿದರು.

ಮಹಿಳೆಯರ ಮೇಲೆ ದೌರ್ಜನ್ಯ ಮಾಡುವವರಿಗೆ ಮತದಾನದ ಹಕ್ಕು ತಡೆಹಿಡಿಯಬೇಕು. ಸರ್ಕಾರಿ ಸೌಲಭ್ಯಗಳನ್ನು ನೀಡಬಾರದು. ಅಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಂತಹ ಅಂಶಗಳನ್ನು ರಾಷ್ಟ್ರೀಯ ನೀತಿಯಲ್ಲಿ ಅಳವಡಿಸಬೇಕು ಎಂದು ಹೇಳಿದರು.

ಇಂತಹ ಅಂಶಗಳನ್ನೊಳಗೊಂಡ ವರದಿಯನ್ನು ರಾಜ್ಯ ಸರ್ಕಾರಕ್ಕೂ ನೀಡಲಾಗಿದೆ. ಎಲ್ಲ 152 ಶಿಫಾರಸುಗಳನ್ನು ಜಾರಿಗೆ ತರುವಂತೆ ಮನವಿ ಮಾಡಲಾಗಿದೆ. ಮುಂದಿನ ಅವಧಿಗೂ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಹಿಡಿಯುವ ವಿಶ್ವಾಸವಿದೆ. ಹಾಗಾಗಿ ಈ ವರದಿ ಅನುಷ್ಠಾನಗೊಳ್ಳಲಿದೆ ಎಂದು ನುಡಿದರು.

ಪೆÇ್ರ.ರಾಧಾಕೃಷ್ಣ ಮಾತನಾಡಿ, ಮೋದಿ, ಅಮಿತ್ ಷಾ ಅವರು ಮಹಾನ್ ಸುಳ್ಳುಗಾರರು. ಕರ್ನಾಟಕವನ್ನೇ ಗುರಿಯಾಗಿಟ್ಟುಕೊಂಡು ವೃಥಾ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದಕ್ಕೆಲ್ಲ ಚುನಾವಣೆಯೇ ಕಾರಣ. ಎಲ್ಲದರಲ್ಲೂ ರಾಜಕಾರಣ ಮಾಡಬಾರದು ಎಂದು ಕಿಡಿಕಾರಿದರು. ಕೆಪಿಸಿಸಿ ಕಾರ್ಯದರ್ಶಿ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ