ಕಾಂಗ್ರೆಸ್‍ಗೆ ಮತ್ತೊಂದು ಸಂಭ್ರಮ – ಸಿ ಫೋರ್ ಸಂಸ್ಥೆ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‍ಗೆ ಮತ್ತೊಮ್ಮೆ ಸ್ಪಷ್ಟ ಬಹುಮತ !

ಬೆಂಗಳೂರು, ಮಾ.26- ರಾಹುಲ್ ಗಾಂಧಿ ಪ್ರವಾಸದಲ್ಲಿ ಕಂಡು ಬಂದ ಜನರ ಪ್ರತಿಕ್ರಿಯೆಯಿಂದ ಆತ್ಮವಿಶ್ವಾಸದ ಶಿಖರದಲ್ಲಿರುವ ಕಾಂಗ್ರೆಸ್‍ಗೆ ಮತ್ತೊಂದು ಸಂಭ್ರಮದ ಬೆಳವಣಿಗೆ ನಡೆದಿದೆ.

ಸಿ ಫೋರ್ ಸಂಸ್ಥೆ ಇಂದು ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಕಟಿಸಿದ್ದು ಅದರಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಅವರೆ ಸೂಕ್ತ ಎಂದು ಸಮೀಕ್ಷೆಯಲ್ಲಿ ಜನಾಭಿಪ್ರಾಯ ವ್ಯಕ್ತವಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸಿ ಫೆÇೀರ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 126 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ. ಕಳೆದ ಸಾಲಿನಲ್ಲಿ 122 ಸ್ಥಾನಗಳನ್ನು ಗೆದ್ದಿದ್ದು ಸರ್ಕಾರ ರಚಿಸಿದ್ದ ಕಾಂಗ್ರೆಸ್ ಈ ಬಾರಿ ಇನ್ನೂ ನಾಲ್ಕು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಲಿದೆ ಎಂದು ಹೇಳಲಾಗಿದೆ.
ಬಿಜೆಪಿ 70 ಸ್ಥಾನಗಳನ್ನು, ಜೆಡಿಎಸ್ 27 ಸ್ಥಾನಗಳನ್ನು, ಪಕ್ಷೇತರ ಒಬ್ಬ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಕಳೆದ ಸಾಲಿಗಿಂತ ಶೇ.9ರಷ್ಟು ಹೆಚ್ಚು ಮತಗಳನ್ನು ಪಡೆಯಲಿದೆ. ಒಟ್ಟು ಶೇ.40ರಷ್ಟು ಮತಗಳು ಕಾಂಗ್ರೆಸ್ ಪಾಲಾಗಲಿವೆ ಎನ್ನಲಾಗಿದೆ.

ಕಳೆದ ಬಾರಿ ಕೆಜೆಪಿ, ಬಿಎಸ್‍ಆರ್ ಕಾಂಗ್ರೆಸ್ ಎಂದು ವಿಂಘಡನೆಯಾಗಿದ್ದ ಬಿಜೆಪಿ ಈ ಬಾರಿ ಒಟ್ಟಾಗಿದ್ದು, ಎಲ್ಲವೂ ಸೇರಿ ಶೇ.31ರಷ್ಟು ಮತಗ¼ನ್ನು ಪಡೆಯಲಿದೆ. ಜೆಡಿಎಸ್ ಕಳೆದ ಸಾಲಿಗಿಂತ ಶೇ.4 ಕಡಿಮೆ ಮತ ಪಡೆದು ತನ್ನ ಪಾಲನ್ನು ಶೇ.16ಕ್ಕೆ ಸೀಮಿತಗೊಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಇನ್ನೂ ಪಕ್ಷೇತರ ಅಭ್ಯರ್ಥಿಗಳಿ ಶೇ.7ರಷ್ಟು ಮತ ಪಡೆಯಲಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿ ಉಲ್ಲೇಖವಾಗಿದೆ.

ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ಎಂಬ ಪ್ರಶ್ನೆಗೆ ಶೇ.45ರಷ್ಟು ಮಂಡಿ ಸಿದ್ದರಾಮಯ್ಯ ಅವರ ಹೆಸರು ಹೇಳಿದ್ದಾರೆ. ಶೇ.26ರಷ್ಟು ಮಂದಿ ಯಡಿಯೂರಪ್ಪ ಅವರ ಹೆಸರನ್ನು, ಶೇ.13ರಷ್ಟು ಮಂದಿ ಕುಮಾರಸ್ವಾಮಿ ಅವರ ಹೆಸರನ್ನು ಹೇಳಿದ್ದಾರೆ. ಶೇ.16 ಮಂದಿ ಇತರರ ಹೆಸರು ಪ್ರಸ್ತಾಪಿಸಿದ್ದಾರೆ.

ರಾಜ್ಯ ಸರ್ಕಾರದ ಸಾಧನೆ ಬಗ್ಗೆ ಶೇ.21ರಷ್ಟು ಮಂದಿ ಸಂತೃಪ್ತಿ ವ್ಯಕ್ತ ಪಡಿಸಿದರೆ, ಶೇ.54ರಷ್ಟು ಮಂದಿ ಸಮಾಧಾನ ಹೊಂದಿದ್ದಾರೆ. ಶೇ.25ರಷ್ಟು ಮಂದಿ ಅತೃಪ್ತಿ ವ್ಯಕ್ತ ಪಡಿಸಿದ್ದಾರೆ.

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಯನ್ನು ಶೇ.61ರಷ್ಟು ಮಂದಿ ಬೆಂಬಲಿಸಿದ್ದಾರೆ, ಶೇ.32 ಮಂದಿ ವಿರೋಧ ವ್ಯಕ್ತ ಪಡಿಸಿದ್ದಾರೆ. ಬಡವರ ಪರವಾಗಿರುವ ಪಕ್ಷ ಯಾವುದು ಎಂಬ ಪ್ರಶ್ನೆಗೆ ಶೇ.65ರಷು ಮಂದಿ ಕಾಂಗ್ರೆಸ್ ಹೆಸರು ಹೇಳಿದರೆ, ಶೇ.19ರಷ್ಟು ಜನ ಬಿಜೆಪಿ ಹೆಸರನ್ನು, ಶೇ.10ರಷ್ಟು ಜನ ಜೆಡಿಎಸ್ ಹೆಸರನ್ನು ಹೇಳಿದ್ದಾರೆ. ರೈತರು, ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣ ಯಾವ ಪಕ್ಷದಿಂದ ಸಾಧ್ಯ ಎಂಬ ಪ್ರಶ್ನೆಗೆ ಹೆಚ್ಚು ಜನ ಕಾಂಗ್ರೆಸ್ ಹೆಸರು ಹೇಳಿದ್ದಾರೆ.

ಸುಮಾರು 154 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಬೂತ್‍ಗೆ ತೆರಳಿ ಮತದಾರರಿಂದ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷೆ ನಡೆಸಿರುವ ಸಿ ಫೆÇೀರ್ ಸಂಸ್ಥೆಯ ಮಾಹಿತಿ ಪ್ರಕಾರ ಕಾಂಗ್ರೆಸ್ ಮೇಲುಗೈ ಸಾಧಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ.
ಕಾಂಗ್ರೆಸ್‍ನ ಶೇಕಡವಾರು ಮತಗಳಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಅದರಂತೆ ಬಿಜೆಪಿ ಮತ ಗಳಿಕೆ ಪ್ರಮಾಣದಲ್ಲೂ ಕೂಡ ಶೇ.11ರಷ್ಟು ಏರಿಕೆಯಾಗಿದೆ. ಜೆಡಿಎಸ್ ಮತ ಗಳಿಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಬಿಜೆಪಿಯ ಮತ ಗಳಿಕೆ ಪ್ರಮಾಣ ಏರಿಕೆಯಾಗಿದ್ದರೂ ಅಭ್ಯರ್ಥಿಗಳ ಗೆಲುವು ನಿಗದಿತ ಪ್ರಮಾಣದಲ್ಲಿ ಆಗಿಲ್ಲ. ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಯಿಂದ ತಿಳಿದುಂದಿದೆ.

ಯಾವುದೇ ಪೂರ್ವಾಗ್ರಹ ಪೀಡಿತವಿಲ್ಲದೆ ಈ ಸಮೀಕ್ಷೆಯನ್ನು ರೂಪಿಸಲಾಗಿದೆ ಎಂದು ಫೆÇೀರ್ ಸಂಸ್ಥೆ ಮುಖ್ಯಸ್ಥ ಪ್ರೇಮ್ ಚಂದ್ ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ.
ರಾಜಕೀಯ ಪಕ್ಷಗಳಿಗೆ ಅನುಮಾನವಿದ್ದರೆ ತಮ್ಮ ಕಚೇರಿಗೆ ಬಂದರೆ ಸ್ಪಷ್ಟನೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಇತ್ತೀಚಿನ ಕೆಲವು ರಾಜಕೀಯ ವಿದ್ಯಮಾನಗಳು, ಹಗರಣಗಳು ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳನ್ನು ಜನರ ಮುಂದಿಟ್ಟು ಪ್ರಶ್ನೆ ಕೇಳಿ ಸಮೀಕ್ಷೆ ರೂಪಿಸಲಾಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಪೈಕಿ 19ರಲ್ಲಿ ಕಾಂಗ್ರೆಸ್ 9ರಲ್ಲಿ ಬಿಜೆಪಿ ಜಯಗಳಿಸಲಿದೆ ಎಂದು ಸಮೀಕ್ಷಾ ವರದಿಯಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ