ತುಮಕೂರು, ಮಾ.26-ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ವಿಶೇಷ ಪೆÇಲೀಸರು 15 ಮಂದಿಯನ್ನು ಬಂಧಿಸಿ 70 ಸಾವಿರ ನಗದು, 12 ಬೈಕ್, 2 ಕಾರು, 15 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿರಾ ಪೆÇಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 48ರ ಬೈಪಾಸ್ ಕರಿಯಮ್ಮ ದೇವಸ್ಥಾನದ ಬಳಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ವಿಶೇಷ ತಂಡ ಆರೋಪಿಗಳಿಂದ 70 ಸಾವಿರ ನಗದು, 12 ಬೈಕ್, 2 ಕಾರು, 15 ಮೊಬೈಲ್‍ಗಳನ್ನು ವಶಪಡಿಸಿಕೊಂಡು 15 ಮಂದಿಯನ್ನು ಬಂಧಿಸಿದ್ದಾರೆ.
ಕೆಂಡಾಮಂಡಲರಾದ ಎಸ್‍ಪಿ: ಜೂಜಾಟ ನಡೆಯುತ್ತಿದ್ದರೂ ಸ್ಥಳೀಯ ಠಾಣೆ ಪೆÇಲೀಸರು ಯಾವುದೇ ಕ್ರಮಕೈಗೊಂಡಿಲ್ಲ. ಪೆÇಲೀಸ್ ವಿಶೇಷ ತಂಡ ದಾಳಿ ನಡೆಸಿದೆ. ಯಾರೊಬ್ಬರೂ ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಅವರು ಗರಂ ಆದರು.