ಅಸ್ಕಿಹಾಳ: ರಸ್ತೆ ಅಗಲಿಕರಣ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ

ರಾಯಚೂರು.ಮಾ.26- ವಾರ್ಡ ನಂ 34 ಅಸ್ಕಿಹಾಳದಲ್ಲಿ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಅಸ್ಕಿಹಾಳ ಸಂತ್ರಸ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ನಗರದ ಲಿಂಗಸುಗೂರು ರಸ್ತೆಯಲ್ಲಿ ಬರುವ ವಾರ್ಡ ನಂ.34ಅಸ್ಕಿಹಾಳ ಗ್ರಾಮದಲ್ಲಿ ರಾಜ್ಯ ಹೆದ್ದಾರಿ ಆಧುನೀಕರಣ ಕಾಮಗಾರಿ ನಡೆಯುತ್ತಿದ್ದು ರಸ್ತೆ ಬದಿಯಲ್ಲಿ ಸುಮಾರು 50 ಮನೆಗಳನ್ನು ತೆರವುಗೊಳಿಸಬೇಕಾಗಿದೆ. ಕೆಲ ಮನೆಗಳು ಪೂರ್ಣವಾಗಿ ತೆರವುಗೊಂಡರೆ ಇನ್ನು ಕೆಲ ಮನೆಗಳು ಸ್ವಲ್ಪ ಭಾಗ ಮಾತ್ರ ತೆರವುಗೊಳಿಸುವುದಾಗಿ ತಿಳಿಸಿದ್ದು, ಆರ್ಥಿಕವಾಗಿ ಬಡ ಕುಟುಂಬಗಳಾಗಿದ್ದು ಇದೀಗ ಮನೆ ಕಳೆದುಕೊಂಡರೆ ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.

ಜಿಲ್ಲಾಡಳಿತ ಎಚ್ಚೆತ್ತುಕೊಂಡು ವಾಜಪೇಯಿ ನಿವೇಶನ ಯೋಜನೆಯಡಿಯಲ್ಲಿ ಮನೆಗಳನ್ನು ಮಂಜೂರು ಮಾಡಬೇಕು ಸ್ವಲ್ಪ ಭಾಗ ಕಳೆದುಕೊಂಡವರಿಗೆ ಸಹಾಯಧನ ನೀಡಬೇಕು, ಪರ್ಯಾಯ ವ್ಯವಸ್ಥೆ ಮಾಡುವವರೆಗೆ ಯಾವುದೆ ತೆರವು ಕಾಯಾಚರಣೆಯನ್ನು ಕೈಗೊಳ್ಳಬಾರದೇಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಆಂಜನೇಯ ಯಕ್ಲಾಸಪುರ ಸೇರಿದಂತೆ ಮನೆಕಳೆದುಕೊಂಡ ನಿವಾಸಿಗಳು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ