ರಾಷ್ಟ್ರಕವಿ ಕುವೆಂಪು ಸ್ಮಾರಕಕ್ಕೆ ಭೇಟಿ ಕೊಟ್ಟ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

ಕುಪ್ಪಳ್ಳಿ: ರಾಷ್ಟ್ರಕವಿ ಕುವೆಂಪು ಸ್ಮಾರಕಕ್ಕೆ ಭೇಟಿ ಕೊಟ್ಟ ಈ ಗಳಿಗೆ ಅವಿಸ್ಮರಣೀಯ. ಇದೊಂದು ಆನಂದದಾಯಕ ಕ್ಷಣ… ಹೀಗೆಂದು ರಾಜ್ಯಸಭಾ ಸದಸ್ಯ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮನದುಂಬಿ ನುಡಿದರು.

ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿರುವ ಕುವೆಂಪು ಸ್ಮಾರಕ ಕವಿಶೈಲಕ್ಕೆ ಭೇಟಿ ನೀಡಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.

ರಾಜ್ಯಕ್ಕೆ ನಾಡಗೀತೆ, ಶ್ರೀರಾಮಾಯಣ ದರ್ಶನಂನಂತಹ ಕೃತಿಗಳನ್ನು ನೀಡಿರುವ ಕುವೆಂಪು ಓರ್ವ ಅಪರೂಪದ ವ್ಯಕ್ತಿ ದೇಶದ ಏಕತೆ ಮತ್ತು ಸಾಮಾರಸ್ಯತೆಗೆ ಅವರ ಕೊಡುಗೆ ಅನನ್ಯ ಎಂದರು.

ಸ್ವಾಮಿ ವಿವೇಕಾನಂದರ ಆದರ್ಶಗಳು ಕುವೆಂಪು ಅವರ ಮೇಲೆ ಪ್ರಭಾವ ಬೀರಿದ್ದವು ಎಂದ ಅವರು ದೇಶದ ಇಂದಿನ ಸ್ಥಿತಿಗತಿಗೆ ಕುವೆಂಪು ಅವರ ಕೃತಿಗಳು ಅತ್ಯಂತ ಪ್ರಸ್ತುತವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಕುವೆಂಪುರವರು ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಎಂದು ಕೊಂಡಾಡಿದ್ದರು. ಅಂತಹ ಶಾಂತಿಯ ಬೀಡಾದ ಈ ರಾಜ್ಯವನ್ನು ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಕೋಮು ಸಂಘರ್ಷ ಮತ್ತು ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿದ್ದು ಅತ್ಯಂತ ಖಂಡನೀಯ. ಇದಕ್ಕೆ ಅವರು ಬೆಲೆ ತೆರೆಯುತ್ತಾರೆ. ದೇಶದ ಹೆಮ್ಮೆ ಕುವೆಂಪು ಅವರು ಬರೆದ ಕಾವ್ಯ ಕೃತಿಗಳು, ನಮ್ಮ ದೇಶದ ಸಾಹಿತ್ಯ ಪರಂಪರೆಯ ಖನಿಜವಾಗಿವೆಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ