ತೀರ್ಥಹಳ್ಳಿ ಅಡಕೆ ಬೆಳೆಗಾರರ ಸಮಾವೇಶ, ಅಡಿಕೆ ಹಾನಿಕಾರಕ ಪಟ್ಟಿಯಿಂದ ಹೊರಕ್ಕೆ: ಶಾ ಭರವಸೆ

ತೀರ್ಥಹಳ್ಳಿ: ಪಿ.ವಿ. ನರಸಿಂಹ ರಾವ್ ಸರ್ಕಾರ ಗುಟ್ಕಾ ಮತ್ತು ಅಡಿಕೆಯ ವ್ಯತ್ಯಾಸವನ್ನು ಅರಿಯದೆ ಅಡಿಕೆಯನ್ನು ಹಾನಿಕಾರಕ ವಸ್ತುಗಳ ಪಟ್ಟಿಯಲ್ಲಿ ಸೇರಿಸಿತು. ಅಡಿಕೆ ಹಾನಿಕರಕವಲ್ಲ. ನಾವು ಅಡಿಕೆಯನ್ನು ಹಾನಿಕಾರಕ ವಸ್ತುಗಳ ಪಟ್ಟಿಯಿಂದ ತೆಗೆದುಹಾಕುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದರು.

ತೀರ್ಥಹಳ್ಳಿಯಲ್ಲಿ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಸರ್ಕಾರ ಅ„ಕಾರಕ್ಕೆ ಬಂದ ನಂತರ ಬಿಳಿ ಅಡಿಕೆ ಮತ್ತು ಕೆಂಪು ಅಡಿಕೆಯ ಬೆಲೆ ಹೆಚ್ಚಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಅತ್ಯ„ಕ ಸಹಾಯವಾಗಿದೆ. ಒಟ್ಟು 40 ಸಾವಿರ ಮೆಟ್ರಿಕ್ ಟನ್ ಅಡಿಕೆ ಖರೀದಿಯನ್ನು ಮೋದಿ ಸರ್ಕಾರ ಮಾಡಿದೆ ಎಂದರು.

ಬಿ.ಎಸ್. ಯಡಿಯೂರಪ್ಪ ಸರ್ಕಾರ ಅ„ಕಾರಕ್ಕೆ ಬಂದ ನಂತರ 500 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗದಲ್ಲಿ ಅಡಿಕೆ ಸಂಶೋಧನಾ ಕೇಂದ್ರಸ್ಥಾಪಿಸಿ ಅಡಿಕೆ ಬೆಳೆಗಾರರ ಸಂಪೂರ್ಣ ಹಿತರಕ್ಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಿವಿ ತೆರೆದು ಕೇಳಿಸಿಕೊಳ್ಳಿ ಸಿದ್ಧರಾಮಯ್ಯನವರೆ, ಕರ್ನಾಟಕಕ್ಕೆ ಯುಪಿಎ ಸರ್ಕಾರ ಕೇವಲ 88 ಸಾವಿರ ಕೋಟಿ ರೂ.ಗಳನ್ನು ಕೊಡುತ್ತಿತ್ತು. ಆದರೆ ಮೋದಿ ಸರ್ಕಾರ ಕರ್ನಾಟಕಕ್ಕೆ  2 ಲಕ್ಷ 19 ಸಾವಿರ ಕೊಡುತ್ತಿದೆ. ಈ ಹಣವೆಲ್ಲ ಹೋಗಿದೇಲ್ಲಿ?  ಎಂದು ಪ್ರಶ್ನಿಸಿದ ಶಾ, ಸಿದ್ಧರಾಮಯ್ಯ ರಂಥ ಅದ್ಭುತ ರಾಜಕೀಯ ಕಲಾವಿದನನ್ನು ನಾನು ಎಲ್ಲೂ ನೋಡಿಲ್ಲ. ಏನು ಕೂಡ ಕೆಲಸ ಮಾಡದೆ, ಜಾಹೀರಾತುಗಳನ್ನು ಮಾತ್ರ ನೀಡುತ್ತಾರೆ ಎಂದರು.

1982 ರಲ್ಲಿ ಯಡಿಯೂರಪ್ಪ ನವರು ರೈತರ, ಬಡವರ ಹಾಗೂ ಕಾರ್ಮಿಕರ ಹಿತಕ್ಷೇಮಕ್ಕಾಗಿ 65 ಕಿಮೀ ಪಾದಯಾತ್ರೆ ಮಾಡಿದ್ದರು. ಇಡೀ ಭಾರತದ¯್ಲÉೀ ಅವರೊಬ್ಬ ರೈತ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿz್ದÁರೆ ಎಂದರು.

ರಾಷ್ಟ್ರೀಯ ಕವಿ ಕುವೆಂಪು ಅವರ ಸ್ಮಾರಕಕ್ಕೆ ನಮನ ಸಲ್ಲಿಸಿ ಬದ್ದಿದ್ದೇನೆ. ಕುವೆಂಪು ಅವರ ಸ್ಥಳಕ್ಕೆ ಭೇಟಿ ಕೊಟ್ಟಿದ್ದು ಖುಷಿಯಾಗಿದೆ. ಕುವೆಂಪು ಅವರ ಸಾಹಿತ್ಯ ಮಣ್ಣಿನ ಮಕ್ಕಳು ಹಾಗೂ ಕನ್ನಡ ಸಂಸ್ಕøತಿ ಬಗ್ಗೆ ಇದೆ. ಸಿದ್ಧರಾಮಯ್ಯ ಅವರು ಕುವೆಂಪು ರೈತಗೀತೆಯಲ್ಲಿ ಇರುವಂತೆ ಎಲ್ಲರನ್ನು ಒಟ್ಟಿಗೆ ಓಂಡೊಯ್ಯು ಅಂತ ಹೇಳುವ ಸಂದೇಶ ಕಲಿಯಬೇಕು. ಪುರುಷೊತ್ತರಾಯರ ಸಂಶೋಧನಾಲಯದಲ್ಲಿ ಊಟ ಮಾಡಿದ್ದೇನೆ. ಅಲ್ಲಿ ನನಿಗೆ ಅಡಿಕೆ ಕೊಟ್ಟರು. ಅದು ಆರೋಗ್ಯಕ್ಕೆ ಉತ್ತಮ ಅಂತ ತಿಳಿದಿದ್ದು ನಾನು ತಿಂದ್ದಿದ್ದೇನೆ ಎಂದರು.

ತೀರ್ಥಹಳ್ಳಿ, ಶಿವಮೊಗ್ಗ ರೈತ ಹೋರಾಟ ಮಾಡುವ ಪವಿತ್ರ ಭೂಮಿ. ಅಂತಹ ಭೂಮಿಗೆ ನಾನು ಇವತ್ತು ಭೇಟಿ ಕೊಟ್ಟಿದ್ದೇನೆ. ಯಡಿಯೂರಪ್ಪ ರೈತರ ಪರವಾಗಿ ಸು„ೀರ್ಘ ಪಾದಯಾತ್ರೆ ಮಾಡಿದ್ದಾರೆ. ಇಡೀ ಪ್ರಪಂಚದಲ್ಲಿ ಬೆಳೆಯುವ ಅಡಿಕೆಯ ಕಾಲು ಭಾಗ ನಮ್ಮ ಕರ್ನಾಟಕದಲ್ಲಿ ಬೆಳೆಯುತ್ತದೆ. ಕಾಂಗ್ರೆಸ್ ಅವ„ಯಲ್ಲಿ ಅನೇಕ ತಪ್ಪು ಒಪ್ಪಂದಗಳು ಆಯ್ತು ಬೇರೆ ದೇಶದ ಕೃಷಿಬೆಳೆಗಳು ಭಾರತಕ್ಕೆ ಆಮದಾಗುವಂತೆ ಮಾಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ