ಸಿದ್ದರಾಮಯ್ಯ ಕೆಟ್ಟ ಟ್ರಾನ್ಸ್ಫಾರ್ಮೆರ್: ಅಮಿತ್ ಶಾ ಲೇವಡಿ

ತೀರ್ಥಹಳ್ಳಿ :ಸಿಎಂ ಸಿದ್ದರಾಮಯ್ಯನವರ ಬಗ್ಗೆ ಅಮಿತ್ ಶಾ ತೀರ್ಥಹಳ್ಳಿಯಲ್ಲಿ ಮತ್ತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುಡಿಗಿದ್ದರೆ .

ತೀರ್ಥಹಳ್ಳಿಯ ಸಾರ್ವಜನಿಕ ಮೈದಾನದಲ್ಲಿ ನಡೆದ ಬಿಜೆಪಿ ಪಕ್ಷದ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯ ಅವರನ್ನ ಭಾಷಣದುದ್ದಕ್ಕೂ ಟೀಕಿಸಿ ಮಾತನಾಡಿದರು.

ಮೊದಲಿಗೆ ವಾಚ್ ಬಗ್ಗೆ ಪ್ರಸ್ತಾಪಿಸಿದ ಅಮಿತ್ ಶಾ ಸಮಾಜವಾದಿ ಹಿನ್ನಲೆಯಲ್ಲಿ ಬಂದವನು ನಾನು ಎಂದು ಹೇಳಿಕೊಂಡು ಓಡಾಡುವ ಸಿಎಂ ಸಿದ್ದರಾಮಯ್ಯ ಅವರ ಬಳಿ 40ಲಕ್ಷ ರೂ ಮೌಲ್ಯದ ವಾಚ್ ಹೇಗೆ ಬಂತು ಎಂದು ಪ್ರಶ್ನಿಸಿದರು.

ಸಾಮಾನ್ಯರಿಗೆ 40ಲಕ್ಷ ರೂ ಮೌಲ್ಯದ ವಾಚ್ ಕಟ್ಟಿಕೊಳ್ಳಲು ಸಾದ್ಯವಿಲ್ಲ. ಭ್ರಷ್ಠಾಚಾರ ನೀವು ನಡೆಸುತ್ತಿದ್ದೀರ ಎಂದರೆ ಹೇಗೆ ಎಂದು ಸಿಎಂ ನಮ್ಮನ್ನೆ ಪ್ರಶ್ನಿಸುತ್ತೀರಿ . 40ಲಕ್ಷ ರೂ ಮೌಲ್ಯದ ವಾಚ್ ಭ್ರಷ್ಠಾಚಾರದಿಂದ ಬಾರದೆ ಇನ್ಯಾವುದು ಮೂಲದಿಂದ ಬರಲು ಸಾದ್ಯವೆಂದರು.

ಹಿಂದಿನ ಯುಪಿಎ ಸರ್ಕಾರ ರಾಜ್ಯಕ್ಕೆ 88 ಸಾವಿರ ಕೋಟಿ ಅನುದಾನ ಕೊಟ್ಟಿತ್ತು ನಮ್ಮ ಸರ್ಕಾರ ರಾಜ್ಯಕ್ಕೆ 3.30 ಲಕ್ಷ ಕೋಟಿ ರೂ ಹಣ ಅನುದಾನ ನೀಡಿದೆ.

ಸಿದ್ದರಾಮಯ್ಯ ಅವರನ್ನ ಕೆಟ್ಟ ಟ್ರಾನ್ಸ್ಫಾರ್ಮೆರ್ ಎಂದು ಬಣ್ಣಿಸಿದ ಅಮಿತ್ ಶಾ ಮನೆಗೆ ಒಳ್ಳೆ ಟ್ರಾನ್ಸ್ಫಾರ್ಮೆರ್ ಇದ್ದರೆ ಗುಣಮಟ್ಟದ ವಿದ್ಯುತ್ ಪಡೆಯಲು ಸಾದ್ಯ. ಪ್ರಧಾನಿ ಮೋದಿ ಉತ್ತಮ ಯೋಜನೆ ಹಾಗೂ ಅನುದಾನ ನೀಡಿದರೆ ನಿಮ್ಮನ್ನ ತಲುಪಲು ರಾಜ್ಯದಲ್ಲಿ ಉತ್ತಮ ಟ್ರಾನ್ಸ್ಫಾರ್ಮೆರ್ ಬೇಕು. ರಾಜ್ಯದಲ್ಲಿ ಸಿಎಂ ಕೆಟ್ಟ ಟ್ರಾನ್ಸ್ಫಾರ್ಮೆರ್ರ್ ಆದುದರಿಂದ ಕೇಂದ್ರದ ಯೋಜನೆ ಇಲ್ಲಿನವರಿಗೆ ಸಿಗುತ್ತಿಲ್ಲ. ಇಂತಹ ಸರ್ಕಾರವನ್ನ ಕಿತ್ತು ಬಿಎಸï.ವೈ ನೇತೃತ್ವದ ಸರ್ಕಾರ ತರಲು ವಿನಂತಿಸಿದರು.

ವೇದಿಕೆ ಮೇಲೆಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ, ಕೇಂದ್ರ ಸಚಿವ ಅನಂತ್ ಕುಮಾರ್ , ಸಂಸದ ಪ್ರಹ್ಲಾದ ಜೋಷಿ, ಬಿಜೆಪಿ ರಾಷ್ಟೀಯ ಕಾರ್ಯದರ್ಶಿ ಮುರುಳೀಧರ್ ರಾವï, ಶಾಸಕ ಜೀವರಾಜï, ಬಿ.ವೈ.ರಾಘವೇಂದ್ರ, ಬಿಜೆಪಿ ಮುಖಂಡರಾದ ಹರತಾಳು ಹಾಲಪ್ಪ, ಬೇಳೂರು ಗೋಪಾಲ ಕೃಷ್ಣ, ಕುಮಾರ್ ಬಂಗಾರಪ್ಪ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ