![Hardik-Pandya](http://kannada.vartamitra.com/wp-content/uploads/2018/03/Hardik-Pandya-381x381.jpg)
ರಾಯಚೂರು.ಮಾ.26-ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಕ್ರಿಕೆಟ್ ಆಟಗಾರ ಅವಹೇಳನಕಾರಿ ಟ್ವೇಟ್ ಮಾಡಿರುವುದನ್ನು ಆರೋಪಿಸಿ ಅಂಬೇಡ್ಕರ್ ಸೇನೆ ಭಾವ ಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ದೇಶದಲ್ಲಿ ಮೀಸಲಾತಿ ಪಿಡುಗು ಹಬ್ಬಿಸಿದವರೇ ಎಂದು ಅವಹೇಳನಕಾರಿ ಟ್ವೇಟ್ ಮಾಡಿದ ಕ್ರಿಕೆಟ್ ಆಟಗಾರ ಹಾರ್ಧಿಕ್ ಪಾಂಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಪದೇ ಪದೇ ಅವಹೇಳನಕಾರಿ ಹೇಳಿಕೆಗಳು ನಡೆಯುತ್ತಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಉನ್ನತ ಸ್ಥಾನದಲ್ಲಿರುವ ಪೇಜಾವರ ಶ್ರೀಗಳು, ಕೇಂದ್ರ ಸಚಿವ ಅನಂತಕುಮಾರ, ಕ್ರಿಕೆಟ್ ಆಟಗಾರ ಹಾರ್ಧಿಕ್ ಪಾಂಡೆ ಪ್ರಜ್ಞಾವಂತರಾಗಿದ್ದರೂ ಇಂತಹ ಹೇಳಿಕೆಗಳನ್ನು ನೀಡಿ ಧಕ್ಕೆಯುಂಟು ಮಾಡುತ್ತಿದ್ದಾರೆ. ಹಾರ್ಧಿಕ್ ಪಾಂಡೆ ವಿರುದ್ಧ ಕ್ರಮ ಕೈಗೊಂಡು ಆಟದಿಂದ ನಿಷೇಧ ಹೇರಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವಿಶ್ವನಾಥ ಪಟ್ಟಿ ಉಪಾಧ್ಯಕ್ಷ ಜಿ.ಭೀಮಣ್ಣ, ಪ್ರಕಾರ್ಯದರ್ಶಿ ಮಹೇಶ ಕುಮಾರ, ದಿನ್ನಿ ವೆಂಕಟೇಶ, ರಂಗಸ್ವಾಮಿ, ಭೀಮೇಶ, ನಾಗರಾಜ, ದೇವೇಂದ್ರ ನಾಗೇಶ, ಶರಣಪ್ಪ, ಹನುಮಂತು, ರಾಜು, ಶ್ರೀನಿವಾಸ, ಆರ್.ಸಿ ವೆಂಕಟೇಶ, ಬಂದೆ ನವಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.