ರಾಮೇಶ್ವರಂ, ಮಾ.25-ಭಾರತೀಯ ಮೀನುಗಾರರು ಮತ್ತು ಶ್ರೀಲಂಕಾ ನೌಕಾಪಡೆ ನಡುವೆ ಸಂಘರ್ಷ ಮುಂದುವರಿದಿದೆ. ದ್ವೀಪರಾಷ್ಟ್ರದ ಜಲ ಪ್ರದೇಶಕ್ಕೆ ನುಗ್ಗಿದರೆನ್ನಲಾದ ಕಾರಣಕ್ಕಾಗಿ ಲಂಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ತಮಿಳುನಾಡಿನ 2,000ಕ್ಕೂ ಹೆಚ್ಚು ಮೀನುಗಾರರನ್ನು ಬೆನ್ನಟ್ಟಿ ಓಡಿಸಿರುವ ಘಟನೆ ಕಚ್ಚತೀವು ದ್ವೀಪದ ಬಳಿ ನಡೆದಿದೆ.
ಶ್ರೀಲಂಕಾ ನೌಕಾ ಪಡೆ ದೌರ್ಜನ್ಯದಿಂದಾಗಿ ಬೆಸ್ತರ ಬಲೆಗಳು ಹರಿದು ಹೋಗಿವೆ.
ರಾಮೇಶ್ವರಂನ ಸುಮಾರು 2,000 ಮಂದಿ 565 ದೋಣಿಗಳಲ್ಲಿ ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದಾಗೆ, ಲಂಕಾ ನೌಕಾಪಡೆ ಯೋಧರು ಅಲ್ಲಿಗೆ ಬಂದು 30 ಬೋಟ್ಗಳ ಬಲೆಗಳನ್ನು ಹರಿದು ಹಾಕಿ ಎಲ್ಲರನ್ನೂ ಅಲ್ಲಿಂದ ಬೆದರಿಸಿ ಓಡಿಸಿದರು ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಎಸ್ ಎಮಿರಿಟ್ ಆರೋಪಿಸಿದ್ದಾರೆ.