ಕಳೆದ ಐದು ವರ್ಷಗಳಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಶೇ.300ಕ್ಕಿಂತ ಹೆಚ್ಚಾಗಿವೆ:

ನವದೆಹಲಿ, ಮಾ.25- ಕಳೆದ ಐದು ವರ್ಷಗಳಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳುತ್ತಿರುವ ಪ್ರಕರಣಗಳು ಶೇ.300ಕ್ಕಿಂತ ಹೆಚ್ಚಾಗಿವೆ. ಈ ಅವಧಿಯಲ್ಲಿ ಅಫೀಮು, ಹೆರಾಯಿನ್ ಮತ್ತು ಗಾಂಜಾಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಜಫ್ತಿ ಮಾಡಲಾಗಿದೆ.
2017ರಲ್ಲೇ 3.6 ಲಕ್ಷ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದು ಸರ್ವಕಾಲಿಕ ದಾಖಲೆಯಾಗಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ.
2013ರಿಂದ 2,551 ಕೆಜಿ ಅಫೀಮು, 2,146 ಕೆಜಿ ಹೆರಾಯಿನ್, 3,52,379 ಕೆಜಿ ಗಾಂಜಾ, 3,128 ಕೆಜಿ ಅಶೀಶ್ ಮತ್ತು 69 ಕೆಜಿ ಕೊಕೈನ್ ವಶಪಡಿಸಿಕೊಳ್ಳಲಾಗಿದೆ. ಪಶ್ಚಿಮ ಆಫ್ರಿಕಾ ಸೇರಿದಂತೆ ವಿವಿಧ ದೇಶಗಳಿಂದ ಭಾರತಕ್ಕೆ ಇವು ಕಳ್ಳಸಾಗಣೆಯಾಗಿದ್ದವು ಎಂದು ವರದಿ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ