ಬೆಂಗಳೂರು, ಮಾ.23- ಫುಟ್ಪಾತ್ ಮೇಲೆ ಮಲಗಿದ್ದ ಪೈಂಟರ್ ಮೃತಪಟ್ಟಿರುವ ಘಟನೆ ವಿಜಯನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಂಜುನಾಥನಗರದ ನಿವಾಸಿ ರಾಮು (40) ಮೃತಪಟ್ಟ ವ್ಯಕ್ತಿ.
ವೃತ್ತಿಯಲ್ಲಿ ಪೈಂಟರ್ ಆಗಿದ್ದ ರಾಮು ಮಾರೇನಹಳ್ಳಿಗೆ ಪೈಂಟ್ ಮಾಡಲು ಬಂದಿದ್ದು, ರಾತ್ರಿ ಫುಟ್ಪಾತ್ನಲ್ಲಿ ಮಲಗಿದ್ದರು.
ಇಂದು ಬೆಳಗಾಗುವಷ್ಟರಲ್ಲಿ ಈ ವ್ಯಕ್ತಿ ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದಾರೆ. ದಾರಿಹೋಕರು ಇದನ್ನು ಗಮನಿಸಿ ವಿಜಯನಗರ ಠಾಣೆ ಪೆÇಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೆÇಲೀಸರು ಪರಿಶೀಲನೆ ನಡೆಸಿದ್ದು, ಈ ವ್ಯಕ್ತಿ ಮೈ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲದಿರುವುದನ್ನು ಗಮನಿಸಿದ ಪೆÇಲೀಸರು ಮರಣೋತ್ತರ ಪರೀಕ್ಷೆಗೆ ಶವವನ್ನು ಸಾಗಿಸಿದ್ದಾರೆ.
ಈ ವ್ಯಕ್ತಿಯ ಸಾವಿಗೆ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ವರದಿ ನಂತರವಷ್ಟೇ ಸಾವು ಹೇಗೆ ಸಂಭವಿಸಿದೆ ಎಂಬುದು ತಿಳಿದುಬರಲಿದೆ.
ಈ ಬಗ್ಗೆ ವಿಜಯನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.