ಸಿಡ್ನಿ, ಮಾ.22- ಭಾರತದ ಪ್ರತಿಭಾವಂತ ಶೂಟರ್ ಎಳಾವೆನಿಲ್ ಒಳಾರಿವನ್ ಜೂನಿಯರ್ ಐಎಸ್ಎಸ್ಎಫ್ ವಿಶ್ವಕಪ್ ಪಂದ್ಯದಲ್ಲಿ ವಿಶ್ವದಾಖಲೆಯೊಂದಿಗೆ ಬಂಗಾರದ ಪದಕ ಗೆದ್ದು ದೇಶ ಹೆಮ್ಮೆಪಡುವಂತೆ ಮಾಡಿದ್ದಾರೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಈ ಋತುವಿನ ಪ್ರಥಮ ಜೂನಿಯರ್ ವಿಶ್ವಕಪ್ನ 100 ಮೀಟರ್ ಮಹಿಳೆಯರ ಏರ್ ರೈಫಲ್ ವಿಭಾಗದಲ್ಲಿ ಎಳಾವೆನಿಲ್ ನಿಖರ ಗುರಿ ಮೂಲಕ ಚಿನ್ನದ ಗೆಲುವಿನ ನಗೆ ಬೀರಿದರು.
ಚಿನ್ನದ ವೈಯಕ್ತಿಕ ಗೆಲುವಿನ ಸಾಧನೆಯಲ್ಲದೆ 19 ವರ್ಷದ ಎಳಾವೆನಿಲ್ ಭಾರತದ ಶ್ರೇಯಾ ಅಗರ್ವಾಲ್ ಮತ್ತು ಜೀನಾ ಖಿಟ್ಟ ಅವರೊಂದಿಗೆ ತಂಡ ಸ್ಪರ್ಧೆಯಲ್ಲೂ ಬಂಗಾರದ ಪದಕ ಗೆದ್ದಿದ್ದಾರೆ. ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಮತ್ತೊಬ್ಬ ಶೂಟರ್ ಅರ್ಜುನ್ ಬಬುಟ ಕಂಚಿನ ಪದಕ ಗೆದ್ದಿದ್ದಾರೆ.