ಕಾಂಗ್ರೆಸ್ ಇಲ್ಲದೆ ಒಕ್ಕೂಟ ರಂಗ ಅಸಾಧ್ಯ – ಡಾ.ಎಂ.ವೀರಪ್ಪ ಮೊಯ್ಲಿ

ಹೈದರಾಬಾದ್,ಮಾ.22- ಕಾಂಗ್ರೆಸ್ ಇಲ್ಲದೆ ಒಕ್ಕೂಟ ರಂಗ ಅಸಾಧ್ಯ ಎಂದು ಹಿರಿಯ ಧುರೀಣ ಮತ್ತು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಅಸ್ತಿತ್ವಕ್ಕೆ ಬರಬಹುದಾದ ಒಕ್ಕೂಟ ರಂಗದ ನಾಯಕತ್ವ ಯಾರು ವಹಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‍ಎಸ್ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಬಿಜೆಪಿಯೇತರ ಮತ್ತು ಕಾಂಗ್ರೆಸ್ಸೇತರ ಒಕ್ಕೂಟ ರಂಗ ರಚಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆದರೆ ಇದು ಬಿಜೆಪಿ ವಿರುದ್ದದ ಪಕ್ಷಗಳನ್ನು ಇಬ್ಭಾಗ ಮಾಡುವ ಕ್ರಮವಾಗಿದೆ ಎಂದು ಆರೋಪಿಸಿದರು.
ರಾವ್ ಅವರ ಒಕ್ಕೂಟ ರಂಗ ರಚನೆ ಪ್ರಸ್ತಾಪವು ಉತ್ತಮ ಮತ್ತು ಸ್ವಾಗತಾರ್ಹ. ಆದರೆ ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮುಖ್ಯ. ಕಾಂಗ್ರೆಸ್ ಇಲ್ಲದ ಇಂಥ ಮೈತ್ರಿಕೂಟ ಅಸಾಧ್ಯ ಎಂದು ಮಾಜಿ ಸಚಿವ ಮೊಯ್ಲಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ