ಏಳು ಕೋಟಿ ರೂ.ಗಳ ಹಣ ದುರ್ಬಳಕೆ ಪ್ರಕರಣ: ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್, ಅವರ ಪತ್ನಿ ಹಾಗೂ ಇತರ ಮೂವರಿಗೆ ವಿಶೇಷ ನ್ಯಾಯಾಲಯವೊಂದು ಇಂದು ಜಾಮೀನು ನೀಡಿದೆ

ನವದೆಹಲಿ, ಮಾ.22-ಏಳು ಕೋಟಿ ರೂ.ಗಳ ಹಣ ದುರ್ಬಳಕೆ ಪ್ರಕರಣದಲ್ಲಿ ಹಿಮಾಚಲ ಪ್ರದೇಶ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್, ಅವರ ಪತ್ನಿ ಹಾಗೂ ಇತರ ಮೂವರಿಗೆ ವಿಶೇಷ ನ್ಯಾಯಾಲಯವೊಂದು ಇಂದು ಜಾಮೀನು ನೀಡಿದೆ.
ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ವೀರಭದ್ರ ಸಿಂಗ್, ಅವರ ಪತ್ನಿ ಪ್ರತಿಭಾ ಸಿಂಗ್ ಹಾಗೂ ಯೂನಿವರ್ಸಲ್ ಆಪಲ್ ಮಾಲೀಕ ಚುನ್ನಿ ಲಾಲ್ ಚೌಹಾಣ್, ಪ್ರೇಮ್ ರಾಮ್ ಮತ್ತು ಲಾವಣ್ ಕುಮಾರ್ ರೋಯಿಚ್ ಅವರಿಗೆ ಜಾಮೀನು ಮಂಜೂರು ಮಾಡಿದರು.
ಕೋರ್ಟ್‍ನಿಂದ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಸಿಂಗ್ ಮತ್ತು ಅವರ ಪತ್ನಿ ಇಂದು ದೆಹಲಿಯ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದರು.
ತಲಾ 50,000 ರೂ.ಗಳ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಜಾಮೀನು ಆಧಾರದ ಮೇಲೆ ಎಲ್ಲ ಆರೋಪಿಗಳಿಗೆ ಜಾಮೀನು ನೀಡಲಾಗಿದೆ.
ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಜಾರಿ ನಿರ್ದೇಶನಾಲಯದ(ಇಡಿ) ವಕೀಲ ನಿತೀಶ್ ರಾಣಾ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೋರಿದ್ದರು. ಆದಾಗ್ಯೂ, ವಿಚಾರಣೆ ವೇಳೆ ಅವರನ್ನು ಇಡಿ ಬಂಧಿಸಿಲ್ಲ ಎಂಬ ಕಾರಣ ನೀಡಿ ಅವರಿಗೆ ಜಾಮೀನು ನೀಡಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ