ಶಿಕಾರಿಪುರ, ಮಾ.19-ನಿಧಿ ಆಸೆಗಾಗಿ ವೃದ್ಧನನ್ನು ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಂಗಪ್ಪ, ಶೇಖರಪ್ಪ, ಮಂಜುನಾಥ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಶಿಕಾರಿಪುರ ತಾಲ್ಲೂಕಿನ ಅಂಜನಾಪುರದ ಚೌಡಮ್ಮ ದೇವಾಲಯದ ಬಳಿ ನಿಧಿ ಇದೆ ಎಂಬುದನ್ನು ಯಾರೋ ಹೇಳಿದ್ದನ್ನು ನಂಬಿದ ಈ ನಾಲ್ವರು ಮಾರ್ಚ್ 7ರಂದು ಅಂಜನಾಪುರ ನಿವಾಸಿ ಕೇಶವನಾಯ್ಕ್(65) ಎಂಬ ವೃದ್ಧನನ್ನು ಪುಸಲಾಯಿಸಿ ನಿರ್ಜನ ಪ್ರದೇಶದ ಬಳಿ ಕರೆದೊಯ್ದು ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಪೆÇಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಧಿ ಆಸೆಗಾಗಿ ಈ ವೃದ್ಧನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.