ವರ್ತೂರು ವ್ಯಾಪ್ತಿಯಲ್ಲಿ ಗುಂಪೊಂದು ಜೂಜಾಡುತ್ತಿದ್ದುದನ್ನು ತಡೆಯಲು ಮುಂದಾದ ಇಬ್ಬರು ಪೊಲೀಸ್ ಕಾನ್‍ಸ್ಟೆಬಲ್‍ಗಳ ಮೇಲೆ ಹಲ್ಲೆ

ಬೆಂಗಳೂರು, ಮಾ.19- ವರ್ತೂರು ವ್ಯಾಪ್ತಿಯಲ್ಲಿ ಗುಂಪೆÇಂದು ಜೂಜಾಡುತ್ತಿದ್ದುದನ್ನು ತಡೆಯಲು ಮುಂದಾದ ಇಬ್ಬರು ಪೆÇಲೀಸ್ ಕಾನ್‍ಸ್ಟೆಬಲ್‍ಗಳ ಮೇಲೆ ಹಲ್ಲೆ ನಡೆಸಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ತಿಳಿಸಿದರು.

ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಡರಾತ್ರಿ ವರ್ತೂರು ವ್ಯಾಪ್ತಿಯಲ್ಲಿ 25 ರಿಂದ 30 ಮಂದಿಯ ಗುಂಪು ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಡುತ್ತಿದ್ದ ಬಗ್ಗೆ ಪೆÇಲೀಸರಿಗೆ ಮಾಹಿತಿ ಬಂದಿದೆ.

ಜೂಜಾಡುವುದನ್ನು ತಡೆಯುವ ಸಲುವಾಗಿ ಕಾನ್‍ಸ್ಟೆಬಲ್‍ಗಳಾದ ಬಸಪ್ಪ ಗಾಣಗೇರ ಮತ್ತು ಶರಣಬಸಪ್ಪ ಎಂಬುವವರು ಸ್ಥಳಕ್ಕೆ ಹೋದಾಗ ಆ ಗುಂಪು ಇವರ ಮೇಲೆಯೇ ಹಲ್ಲೆ ನಡೆಸಿದೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಘಟನೆಯಲ್ಲಿ ಒಬ್ಬ ಕಾನ್‍ಸ್ಟೆಬಲ್‍ಗೆ ತೀವ್ರತರದ ಗಾಯವಾಗಿದೆ. ಪ್ರಸ್ತುತ ನಾಲ್ವರನ್ನು ಬಂಧಿಸಿದ್ದು, ಉಳಿದವರನ್ನು ಕೂಡಲೇ ಬಂಧಿಸಲಾಗುವುದು ಎಂದರು.
ಇಸ್ಪೀಟ್ ಆಡುವುದು ತಪ್ಪು. ಹಬ್ಬದ ಸಂದರ್ಭದಲ್ಲಿ ಇಸ್ಪೀಟ್ ಆಡಲು ಅನುಮತಿ ಇಲ್ಲ. ಕಾನ್‍ಸ್ಟೆಬಲ್ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಕಾನ್‍ಸ್ಟೆಬಲ್‍ಗಳ ಬಳಿ ಲಾಠಿ ಇರುತ್ತೆ, ರೈಫಲ್ ಇರುವುದಿಲ್ಲ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾರ್ವಜನಿಕವಾಗಿ ಮದ್ಯ ಸೇವಿಸಲು ಅವಕಾಶ ಇಲ್ಲ. ಈ ನಿಟ್ಟಿನಲ್ಲಿ ಪೆÇಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದರು.

ಬಿಜೆಪಿ ಮುಖಂಡರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಇಲ್ಲಿ ರಾಜಕೀಯ ಪಕ್ಷ ಎಂಬುದು ಮುಖ್ಯವಲ್ಲ. ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೆÇಲೀಸರ ಮೇಲೆ ಹಲ್ಲೆ ನಡೆಸಿರುವುದು ತಪ್ಪು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ