ಚೆನ್ನೈ: ಮಾ-18: ದಕ್ಷಿಣ ಭಾರತ ಪ್ರತ್ಯೇಕ ದೇಶವಾದರೆ ಬೆಂಬಲ ನೀಡುತ್ತೇನೆ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೊಸ ಪ್ರತ್ಯೇಕತಾವಾದವನ್ನು ಹುಟ್ಟುಹಾಕಿದ್ದಾರೆ.
ದಕ್ಷಿಣ ಭಾರತದವರು ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ. ಅದರಲ್ಲಿ ಕೇಂದ್ರದಿಂದ ಅಲ್ಪ ಪ್ರಮಾಣದಷ್ಟು ಮಾತ್ರ ರಾಜ್ಯಗಳಿಗೆ ಹಿಂತಿರುಗುತ್ತಿದೆ ಎಂದು ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು ಅಸಮಾಧಾನ ಹೊರ ಹಾಕಿದ ಬೆನ್ನಲ್ಲೇ ಸ್ಟಾಲಿನ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ದಕ್ಷಿಣ ರಾಜ್ಯಗಳೆಲ್ಲಾ ಒಗ್ಗೂಡಿ `ದ್ರಾವಿಡನಾಡು’ ದೇಶದ ಕನಸು ಕಾಣುತ್ತಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸ್ಟಾಲಿನ್, ಪ್ರತ್ಯೇಕ ದೇಶದ ಪರಿಸ್ಥಿತಿ ಬಂದರೆ ಬೆಂಬಲಿಸುವೆ. ಪ್ರತ್ಯೇಕ ರಾಷ್ಟ್ರವಾಗಲಿ ಎಂದು ನಾನು ಬಯಸುವೆ ಕೂಡ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ತಮಿಳುನಾಡಿನ ಡಿಎಂಕೆ ನಾಯಕ ಸ್ಟಾಲಿನ್ ಸಹ ಪ್ರತ್ಯೇಕತವಾದವನ್ನು ಬೆಂಬಲಿಸಿದ್ದಾರೆ. `ದ್ರಾವಿಡ ನಾಡು’ ಪರಿಕಲ್ಪನೆಯಲ್ಲಿ ದಕ್ಷಿಣದ ರಾಜ್ಯಗಳು ಒಂದಾಗುತ್ತಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಪ್ರತ್ಯೇಕ ದೇಶದ ಬೇಡಿಕೆಯನ್ನು ಸಮರ್ಥಿಸಿಕೊಂಡ ಸ್ಟಾಲಿನ್. ನಮ್ಮ ಪಕ್ಷ 1949ರಲ್ಲಿ ಜಾರಿಗೆ ಬಂದಾಗ ಪ್ರತ್ಯೇಕ ರಾಷ್ಟ್ರ ನಮ್ಮ ಪಕ್ಷದ ಬೇಡಿಕೆಗಳಲ್ಲಿ ಒಂದಾಗಿತ್ತು, ನಂತರ ಅದನ್ನು ಕೈಬಿಡಲಾಗಿತ್ತು ಎಂದರು.