ನಿಷೇಧಗೊಂಡಿದ್ದ 500 ಹಾಗೂ 1000 ರೂ ನೋಟುಗಳನ್ನು ಆರ್ ಬಿಐ ಏನು ಮಾಡುತ್ತೆ ಗೊತ್ತೆ..?

Thick stacks of 500 and 1000 rupee notes.

ನವದೆಹಲಿ:ಮಾ-18: ನಿಷೇಧಗೊಂಡಿದ್ದ 500 ಹಾಗೂ 1000 ರೂ ನೋಟುಗಳನ್ನು ಪುಡಿ ಮಾಡಲಾಗುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

2017 ರ ಜೂನ್ ವರೆಗೂ 15.28 ಟ್ರಿಲಿಯನ್ ಮೊತ್ತದ ಹಳೆಯ 500, 1,000 ರೂಪಾಯಿ ನೋಟುಗಳು ಲಭ್ಯವಾಗಿದೆ ಎಂದು ಆರ್ ಬಿಐ ಹೇಳಿತ್ತು. ಈಗ ಇಷ್ಟೂ ನೋಟುಗಳನ್ನು ಪುಡಿ ಮಾಡಲಾಗುತ್ತಿದೆ ಎಂದು ಹೇಳಿದೆ.

ಆರ್ ಟಿಐ ಪ್ರಶ್ನೆಗೆ ಉತ್ತರಿಸಿರುವ ಆರ್ ಬಿಐ, ಅತ್ಯಾಧುನಿಕ ಕರೆನ್ಸಿ ಪರಿಶೀಲನೆ ಮತ್ತು ಸಂಸ್ಕರಣಾ ವ್ಯವಸ್ಥೆಯ ಮೂಲಕ ನೋಟುಗಳ ಎಣಿಕೆ ಕಾರ್ಯ ನಡೆಯುತ್ತಿದ್ದು ಟೆಂಡರಿಂಗ್ ಪ್ರಕ್ರಿಯೆಯ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ