ಡೋಕ್ಲಾಂ ವಿವಾದ ಪುನರಾವರ್ತನೆಯಾಗದು: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ

ನವದೆಹಲಿ:ಮಾ-18: ಡೋಕ್ಲಾಮ್  ಬಿಕ್ಕಟ್ಟು ಮತ್ತೆ ಪುನರಾವರ್ತೆನೆಯಾಗುವುದಿಲ್ಲ ಎಂದು ನಾನು ಭಾವಿಸಿದ್ದೇನೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರೈಸಿಂಗ್ ಇಂಡಿಯಾ ಶೃಂಗಸಭೆಯಲ್ಲಿ ಮಾತನಾಡಿದ ಅವರು ವಿವಿಧ  ಹಂತಗಳಲ್ಲಿ ಚೀನಾ ಜೊತೆ ಭಾರತವು ಒಪ್ಪಂದಗಳನ್ನು  ಮಾಡಿಕೊಂಡಿದೆ. ಎರಡನೇ ಡೋಕ್ಲಾಮ್ ವಿವಾದ ಸಂಭವಿಸುವುದಿಲ್ಲ ಎನ್ನುವುದನ್ನು ನಾನು ನಿಸ್ಸಂಶಯವಾಗಿ ಹೇಳುತ್ತೇನೆ. ಆದರೆ ಈ ಕುರಿತಂತೆ ವಿವಿಧ ಹಂತಗಳಲ್ಲಿ ಮಾತುಕತೆಗಳು ನಡೆಯುತ್ತಿದೆ ಎಂದಿದ್ದಾರೆ.

ನಾವು ಈ ಸಂಬಂಧದ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ, ಸುಮಾರು ಇಪ್ಪತ್ತು ಪ್ರತಿನಿಧಿ ಸಭೆಗಳಲ್ಲಿ ನಮ್ಮ ಶಾಶ್ವತ ಪ್ರತಿನಿಧಿಗಳಿದ್ದಾರೆ. ನಾವು ಗಡಿ ಅಧಿಕಾರಿಗಳೊಡನೆ ಸಭೆ ನಡೆಸಿದ್ದೇವೆ, ಧ್ವಜ ಸಭೆಗಳನ್ನು ಆಯೋಜಿಸುತ್ತಿದ್ದೇವೆ. ಇತ್ತೀಚೆಗೆ ಸೇನಾ ಮುಖ್ಯಸ್ಥರು ಸಹ ಇದೇ ಹೇಳಿಕೆಗಳನ್ನು ನೀಡಿದ್ದಾರೆ. ನಾವು ಚೀನಾದೊಡನೆ ಹಲವು ಹಂತದ ನಿರಂತರ ಮಾತುಕತೆಗಳಲ್ಲಿ ತೊಡಗಿದ್ದೇವೆ ಎಂದು ಸಚಿವರು ಹೇಳಿದ್ದಾರೆ.

ಕಳೆದ ವರ್ಷ ಡೋಕ್ಲಾಮ್  ವಿಚಾರವಾಗಿ ಭಾರತ ಹಾಗೂ ಚೀನಾ ಗಡಿಯಲ್ಲಿ ನಿರಂತರ 73 ದಿನಗಳ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿವಿಧ ಹಂತದ ಮಾತುಕತೆಗಳ ಹೊರತಾಗಿಯೂ ಸೈನ್ಯವು ಸದಾ ಸನ್ನದ್ಧ ಸ್ಥಿತಿಯಲ್ಲಿರಬೇಕಾದದ್ದು ಅಗತ್ಯ ಎಂದು ಸಚಿವರು ಒತ್ತಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ