ಬೆಂಗಳೂರು,ಮಾ.17-ಮಲ್ಲೇಶ್ವರಂನ ಶ್ರೀ ರಾಮಮಂದಿರ ವತಿಯಿಂದ ನಾಳೆಯಿಂದ ಏ.3ರವರೆಗೆ ಶ್ರೀ ರಾಮೋತ್ಸವ ಆಚರಿಸಲಾಗುತ್ತಿದೆ.
ನಾಳೆ ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆವರೆಗೆ ನವಗ್ರಹ ಪ, ರಾಮಾಯಣ ಪಾರಾಯಣ, ಶ್ರೀ ರಾಮನಿಗೆ ವಿಶೇಷ ಪೂಜೆ ನಡೆಯಲಿದೆ. ಸಂಜೆ 4.50ರಿಂದ 5.30ರಿಂದ ರಾತ್ರಿ 8.30ರವರೆಗೆ ಯುಗಾದಿ ಹಬ್ಬದ ಪ್ರಯುಕ್ತ ಪಂಚಾಂಗ ಶ್ರವಣ, ವಿದುಷಿ ಸೀತಾ ಸತ್ಯನಾರಾಯಣ ಅವರಿದ ಕರ್ನಾಟಕ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
19ರಂದು ಸಂಜೆ 6.30ರಿಂದ 8.30ರವರೆಗೆ ವಿದ್ವಾನ್ ಶ್ರೀಧರ್ ಸಾಗರ್ ಅವರಿಂದ ಸ್ಯಾಕ್ಸೋಫೆÇೀನ್, 20ರಂದು ಸಂಜೆ 6.30ರಿಂದ 8.30ರವರೆಗೆ ವಿದ್ವಾನ್ ಆರ್.ಕೆ.ಪ್ರಸನ್ನಕುಮಾರ್ ಅವರಿಂದ ಗಾಯನ ನಡೆಯಲಿದೆ.
21ರಂದು ಸಂಜೆ 6.30ರಿಂದ 8.30ರವರೆಗೆ ನೃತ್ಯಲಹರಿ ಕಲಾಕೇಂದ್ರ ಟ್ರಸ್ಟ್‍ನಿಂದ ಭರತನಾಟ್ಯ, 22ರಂದು ಡಾ.ಲಕ್ಷ್ಮಿನಾರಾಯಣ ಮತ್ತು ತಂಡದವರಿಂದ ಮ್ಯಾಂಡೋಲಿನ್, 23ರಂದು ವಿದಷಿ ರೇವತಿ ಸದಾಶಿವಮ್ ತಂಡದಿಂದ ವೀಣಾವಾದನ, 24ರಂದು ವಿದುಷಿ ರೇಖ ಹರಿನಾಥ್ ಅವರಿಂದ ಗಾಯನ, 25ರಂದು ಬೆಳಗ್ಗೆ 9ರಿಂದ 12 ಗಂಟೆವರೆಗೆ ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ, ಸಂಜೆ 5.30ರಿಂದ 7.30ರವರೆಗೆ ಸ್ತುತಿವಾಹಿನಿ ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಶಾಸಕ ಸಿ.ಎನ್.ಅಶ್ವಥ್ ನಾರಾಯಣ, ಬಿಬಿಎಂಪಿ ಸದಸ್ಯ ಜಿ.ಮಂಜುನಾಥರಾಜು ಆಗಮಿಸಲಿದ್ದಾರೆ ಎಂದು ಟ್ರಸ್ಟ್‍ನ ಪ್ರಕಟಣೆ ತಿಳಿಸಿದೆ.