ನವದೆಹಲಿ, ಮಾ.16- ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಪ್ರಕರಣ ಸಂಬಂಧ ಬಿಸಿಸಿಐನಿಂದ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ತಿಳಿಸುವುದಾಗಿ ಐಪಿಎಲ್ನ ಮುಖ್ಯಸ್ಥ ರಾಜೀವ್ಶುಕ್ಲಾ ತಿಳಿಸಿದ್ದಾರೆ.
ಶಮಿ ಅವರ ಪತ್ನಿ ಹೆಸಿನ್ ಜಹಾನ್ ದಾಖಲಿಸಿರುವ ಪ್ರಕರಣಕ್ಕೆ ಕುರಿತಂತೆ ಬಿಸಿಸಿಐನ ವಿನೋದ್ರೈ ಅವರು ತನಿಖೆ ನಡೆಸುವಂತೆ ಭ್ರಷ್ಟಾಚಾರ ವಿರೋಧಿ ಘಟಕದ ಮುಖ್ಯಸ್ಥ ನೀರಾಜ್ ಕುಮಾರ್ಗೆ ಸೂಚಿಸಿದ್ದು ಅವರಿಂದ ಬರುವ ಮಾಹಿತಿಯನ್ನು ಆಧಾರಿಸಿ ಶಮಿಗೆ ಐಪಿಎಲ್ನಲ್ಲಿ ಸ್ಥಾನ ಕಲ್ಪಿಸಬೇಕೆ ಬೇಡವೇ ಎಂಬುದರ ಬಗ್ಗೆ ತಿಳಿಸುವುದಾಗಿ ಶುಕ್ಲಾ ಸುದ್ದಿಗಾರರಿಗೆ ಹೇಳಿದ್ದಾರೆ.
ಮೊಹಮ್ಮದ್ ಶಮಿಯು ಐಪಿಎಲ್ನಲ್ಲಿ ಡೆಲ್ಲಿಡೇವಿಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು ಅವರ ವಿರುದ್ಧ ಕೋಲ್ಕತ್ತಾ ಪೆÇಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿವೆ.