ಬೆಂಗಳೂರು, ಮಾ.13- ಮೊಬೈಲ್ ಅಂಗಡಿಯೊಂದರ ರೋಲಿಂಗ್ ಶೆಟರ್ ಮೀಟಿ ಒಳನುಗ್ಗಿದ ಚೋರರು 1.60 ಲಕ್ಷ ರೂ. ಮೌಲ್ಯದ ಮೊಬೈಲ್ಗಳನ್ನು ಕಳ್ಳತನ ಮಾಡಿರುವ ಘಟನೆ ಹನುಮಂತನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೃಂದಾವನ ನಗರದ 5ನೇ ಮುಖ್ಯರಸ್ತೆಯಲ್ಲಿ ಸತೀಶ್ ಎಂಬುವರಿಗೆ ಸೇರಿದ ಸಹನಾ ಮೊಬೈಲ್ ಅಂಗಡಿ ಇದ್ದು, ಮೊನ್ನೆ ರಾತ್ರಿ ಕಳ್ಳರು ಅಂಗಡಿಯ ರೋಲಿಂಗ್ ಶೆಟರ್ ಮೀಟಿ ಒಳನುಗ್ಗಿ 15 ಹೊಸ ಮೊಬೈಲ್ ಹಾಗೂ 5 ಹಳೆಯ ಮೊಬೈಲ್ಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.