ಎಟಿಎಂಗಳಲ್ಲಿ ಹಣ ಇಲ್ಲ: ಮತ್ತೆ ಎದುರಾಯ್ತು ನೋಟ್ ಬ್ಯಾನ್ ಅವಧಿಯ ಸ್ಥಿತಿ; ಬ್ಯಾಂಕ್ ಗಳಿಗೆ ಜನರ ಹಿಡಿಶಾಪ

 

ಕಲಬುರಗಿ: ರಾಜ್ಯದಲ್ಲಿ ಮತ್ತೆ ನೋಟ್ ಬ್ಯಾನ್ ಅವಧಿಯ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಕಲಬುರಗಿ ಜಿಲ್ಲೆಯ ಬಹುತೇಕ ಎಟಿಎಂಗಳಲ್ಲಿ ಹಣದ ಕೊರತೆ ಇರುವುದರಿಂದ ನಗದು ಹಣದ ಸಮಸ್ಯೆ ಎದುರಾಗಿದ್ದು, ಬ್ಯಾಂಕ್ ಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಜಿಲ್ಲೆಯ ಬಹುತೇಕ ಬ್ಯಾಂಕ್ ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ. ಕೆಲ ಬ್ಯಾಂಕ್ ಎಟಿಎಂಗಳಲ್ಲಿ ಹಣ ಹಾಕುತ್ತಿದ್ದಂತೆ ಖಾಲಿಯಾಗುತ್ತಿದೆ. ನಗದು ಹಣ ಇರುವ ಎಟಿಎಂಗಳ ಮುಂದೆ ಬಿಸಿಲನ್ನು ಲೆಕ್ಕಿಸದೆ ಜನ ಸರದಿ ಸಾಲಿನಲ್ಲಿ ನಿಂತು ಹಣ ಡ್ರಾ ಮಾಡುತ್ತಿದ್ದಾರೆ.

ಈ ಮುಂಚೆ ನೋಟು ಬ್ಯಾನ್ ಆದಾಗ ಎದುರಾಗಿದ್ದ ಸಮಸ್ಯೆ ಇದೀಗ ಮತ್ತೊಮ್ಮೆ ಎದುರಾಗಿದ್ದು,  ಸಾರ್ವಜನಿಕರು ತೀವ್ರ ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹಣ ನಮಗೆ ಸಿಗ್ತಿಲ್ಲ. ಹಣ ಪಡೆಯಲು ದಿನಪೂರ್ತಿ ಸರದಿ ಸಾಲಿನಲ್ಲಿ ನಿಂತರೆ ಮುಂದಿನ ಕೆಲಸ ಹೇಗೆ ಎಂದು ಪ್ರಶ್ನಿಸುತ್ತಿದ್ದಾರೆ.

ಕಳೆದ 10ದಿನಗಳಿಂದ ಎಟಿಎಂಗಳಲ್ಲಿ ಹಣ ಸಿಗದಿರುವ ಕಾರಣ ಜನ ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಡಿಜಿಟಲ್ ಮೂಲಕ ವ್ಯವಹಾರ ನಡೆಸಲು ಜನರ ಮೇಲೆ ಒತ್ತಡ ತರಲು ಸರ್ಕಾರ ಈ ಕೆಲಸ ಮಾಡುತ್ತಿದೆ ಎನ್ನಲಾಗುತ್ತಿದೆ. ಗ್ರಾಹಕರು ಸರ್ಕಾರ ಮತ್ತು ಬ್ಯಾಂಕ್‌ಗಳಿಗೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಶೀಘ್ರವೇ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ