ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸಂಸ್ಥಾಪಕ ಹಫೀಜ್ ಸಯೀದ್ ಬಣಕ್ಕೆ ರಾಜಕೀಯ ಪಕ್ಷದ ಮಾನ್ಯತೆ ನೀಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಸೂಚಿಸಿದೆ

ಇಸ್ಲಾಮಾಬಾದ್, ಮಾ.9-ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರ ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸಂಸ್ಥಾಪಕ ಹಫೀಜ್ ಸಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಬಣವನ್ನು ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವಂತೆ ಪಾಕಿಸ್ತಾನ ನ್ಯಾಯಾಲಯವೊಂದು ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ. ಇದರಿಂದಾಗಿ ಕುಖ್ಯಾತ ಭಯೋತ್ಪಾದಕನ ನೇತೃತ್ವದ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಲು ಹಾದಿ ಸುಗಮವಾಗಿದೆ.
ಜೆಯುಡಿ ಮುಖ್ಯಸ್ಥನನ್ನು ಬಂಧಿಸುವ ಸಾಧ್ಯತೆ ವಿರುದ್ಧ ಈಗಾಗಲೇ ಏಪ್ರಿಲ್ 4ರವರೆಗೆ ತಡೆಯಾಜ್ಞೆ ನೀಡಿ ಪಾಕಿಸ್ತಾನದ ನ್ಯಾಯಾಲಯವೊಂದು ಆದೇಶ ನೀಡಿದ ಬೆನ್ನಲ್ಲೇ ಸಯೀದ್‍ಗೆ ಲಭಿಸಿದ ಮತ್ತೊಂದು ಕಾನೂನು ಗೆಲುವು ಇದಾಗಿದೆ.
ರಾಜಕೀಯ ಪಕ್ಷವಾಗಿ ಎಂಎಂಎಲ್‍ನನ್ನು ನೋಂದಣಿ ಮಾಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಪಾಕಿಸ್ತಾನ ಚುನಾವಣಾ ಆಯೋಗದ ನಿರ್ಧಾರವನ್ನು ತಳ್ಳಿ ಹಾಕಿರುವ ಇಸ್ಲಾಮಾಬಾದ್ ಹೈಕೋರ್ಟ್, ಸಯೀದ್ ಬಣಕ್ಕೆ ರಾಜಕೀಯ ಪಕ್ಷದ ಮಾನ್ಯತೆ ನೀಡುವಂತೆ ಸೂಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ