ಮಹಿಳೆಯರ 50 ಮೀಟ್ 3 ಪೊಸಿಷನ್ಸ್ ಸ್ಫರ್ಧೆಯಲ್ಲಿ ಅಂಜುಮ್ ಮೌಡ್‍ಗಿಲ್ ಗೆ ರಜಕ ಪದಕ

ಗಾದಲಜಾರಾ, ಮಾ.9-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್‍ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರಿದಿದೆ. ಮಹಿಳೆಯರ 50 ಮೀಟ್ 3 ಪೊಸಿಷನ್ಸ್ ಸ್ಫರ್ಧೆಯಲ್ಲಿ ಅಂಜುಮ್ ಮೌಡ್‍ಗಿಲ್ ರಜಕ ಪದಕ ಗೆದ್ದಿದ್ದಾರೆ.
ಇದು ಅಂಜುಮ್ ಜಯಿಸಿದ ಚೊಚ್ಚಲ ವಿಶ್ವ ಕಪ್ ಪದಕವಾಗಿದೆ. ತೀವ್ರ ಪೈಪೋಟಿಯೆದ್ದ 45-ಶಾಟ್ ಫೈನಲ್‍ನಲ್ಲಿ ಭಾರತದ ಶೂಟರ್ 454.2 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕ ಗಳಿಸಿದರು.
ಚೀನಾದ ಮಾಜಿ ಜ್ಯೂನಿಯರ್ ವಿಶ್ವ ಚಾಂಪಿಯನ್ ರ್ಯುಜಿಯಾವೋ ಪೀ (455.4) ಪ್ರಥಮ ಹಾಗೂ ಚೀನಾದವರೇ ಆದ ಟಿಂಗ್ ಸುನ್ (442.2) ತೃತೀಯ ಸ್ಥಾನ ಗಳಿಸಿದರು.
ಮೆಕ್ಸಿಕೋದ ಗಾದಲಜಾರಾದಲ್ಲಿ ನಡೆಯುತ್ತಿರುವ ವಿಶ್ವ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಈವರೆಗೆ ಎಂಟು ಪದಕಗಳನ್ನು ಪಡೆದಿದೆ. ಈಗಾಗಲೇ ಭಾರತ ಮೂರು ಚಿನ್ನ ಮತ್ತು ನಾಲ್ಕು ಕಂಚು ಪದಕಗಳನ್ನು ಗಳಿಸಿದ್ದು, ಇದು ಮೊದಲ ರಜತವಾಗಿದೆ.
ಪದಕಗಳ ಪಟ್ಟಿಯಲ್ಲಿ ಎಂಟು ಪದಕಗಳೊಂದಿಗೆ ಭಾರತ ಅಗ್ರ ಸ್ಥಾನದಲ್ಲಿದ್ದು, ಐದು ಮೆಡಲ್‍ಗಳನ್ನು (ಎರಡು ಬಂಗಾರ, ಎರಡು ರಜನ ಮತ್ತು ಒಂದು ಕಂಚು) ಪಡೆದಿರುವ ಚೀನಾ ದ್ವಿತೀಯ ಸ್ಥಾನದಲ್ಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ