ಲೆನಿನ್‌ ಪ್ರತಿಮೆ ಯಾರು ಸ್ಥಾಪಿಸದ್ದರೋ ಅವರೇ ಅದನ್ನು ತೆಗೆಸಿದ್ದಾರೆ; ಇದು ಪ್ರತಿಮೆ ಧ್ವಂಸದ ಕೃತ್ಯವಲ್ಲ: ಬಿಜೆಪಿಯ ರಾಮ ಮಾಧವ್‌ ಹೇಳಿಕೆ

ನವದೆಹಲಿ:ಮಾ-9: ತ್ರಿಪುರದ ಬೆಲೋನಿಯಾದಲ್ಲಿ ನಡೆದಿದ್ದ  ಪ್ರತಿಮೆ ಧ್ವಂಸ ಕೃತ್ಯವಲ್ಲ ಬದಲಾಗಿ “ಲೆನಿನ್‌ ಪ್ರತಿಮೆಯನ್ನು ಸ್ಥಾಪಿಸಿದವರೇ ಅದನ್ನು ತೆಗೆದಿದ್ದಾರೆ ಎಂದು ಬಿಜೆಪಿಯ ರಾಮ ಮಾಧವ್‌ ಹೇಳಿಕೆ ನೀಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ಸಿಪಿಎಂ ನ ಮಾಣಿಕ್‌ ಸರ್ಕಾರ್‌ ಅವರು ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬಲೋನಿಯಾ ಕಾಲೇಜು ಚೌಕದಲ್ಲಿದ್ದ ವ್ಲಾದಿಮಿರ್‌ ಲೆನಿನ್‌ ಅವರ ಪ್ರತಿಮೆಯನ್ನು ಬುಲ್‌ಡೋಜರ್‌ ಮೂಲಕ ಕಿತ್ತೆಸೆಯಲಾದ ವಿಡಿಯೋ ಚಿತ್ರಿಕೆ ದೇಶಾದ್ಯಂತ ಭಾರೀ ಸುದ್ದಿ ಮಾಡಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

ಲೆನಿನ್‌ ಪ್ರತಿಮೆಯನ್ನು ಯಾರು ಸ್ಥಾಪಿಸದ್ದರೋ ಅವರೇ ಅದನ್ನು ತೆಗೆಸಿದ್ದಾರೆ. ಇದು ಪ್ರತಿಮೆ ಧ್ವಂಸದ ಕೃತ್ಯವಲ್ಲ. ತ್ರಿಪುರದಲ್ಲಿ ಎಲ್ಲಿಯೂ ಯಾವುದೇ ಪ್ರತಿಮೆಯನ್ನು ಧ್ವಂಸ ಮಾಡಲಾಗಿಲ್ಲ. ಲೆನಿನ್‌ ಪ್ರತಿಮೆ ಧ್ವಂಸ ಮಾಡಲಾಯಿತೆಂಬ ಮಾಹಿತಿ ಸರಿಯಲ್ಲ. ಖಾಸಗಿ ಜಾಗದಲ್ಲಿ ಆ ಪ್ರತಿಮೆಯನ್ನು ಹಾಕಿಸಿದವರೇ ಅದನ್ನು ತೆಗೆಸಿದ್ದಾರೆ. ಆದುದರಿಂದ ಇದು ಪ್ರತಿಮೆ ಭಂಜನೆ ಕೃತ್ಯವಲ್ಲ ಎಂದು ರಾಮ ಮಾಧವ್‌ ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ