ಶಿಲ್ಲಾಂಗ್:ಮಾ-೬: ಮೇಘಾಲಯದ ನೂತನ ಸಿಎಂ ಆಗಿ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ ಪಿಪಿ) ಮುಖ್ಯಸ್ಥ ಕನ್ರಾಡ್ ಸಂಗ್ಮಾ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಶಿಲ್ಲಾಂಗ್ ನ ರಾಜಭವದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಗಂಗಾ ಪ್ರಸಾದ್ ಅವರು ಸಂಗ್ಮಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬೆಳಗ್ಗೆ 10.30ರಲ್ಲಿ ರಾಜಭವನದಲ್ಲಿ ನಡೆದ ಪ್ರತಿಜ್ಞಾವಿಧಿ ಭೋಧನಾ ಕಾರ್ಯಕ್ರಮದಲ್ಲಿ ಸಂಗ್ಮಾ ಅವರೊಂದಿಗೆ ಹಲವು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 59 ಸ್ಥಾನಗಳ ಪೈಕಿ ಕಾಂಗ್ರೆಸ್ ಗೆ ಅತೀ ಹೆಚ್ಚು ಅಂದರೆ 21 ಸ್ಥಾನ, ಎನ್ ಪಿಪಿಗೆ 19 ಸ್ಥಾನ, ಬಿಜೆಪಿ 2 ಹಾಗೂ ಇತರರು 17 ಸ್ಥಾನ ಗಳಿಸಿದ್ದರು. ಆದರೆ ಮೇಘಾಲಯದಲ್ಲಿ ಸರ್ಕಾರ ರಚನೆಗೆ 31 ಸ್ಥಾನಗಳ ಅಗತ್ಯತೆ ಇದ್ದು, ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಬಹುಮತ ಇರಲ್ಲ. ಹೀಗಾಗಿ ಸ್ಥಳೀಯ ಪಕ್ಷಗಳು ಹಾಗೂ ಸ್ವತಂತ್ರ್ಯ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಬಿಜೆಪಿ ಮುಂದಾಗಿತ್ತು. ಆ ಮೂಲಕ ಬಿಜೆಪಿ, ಎನ್ ಪಿಪಿ ಸೇರಿದಂತೆ ಇತರೆ ನಾಲ್ಕು ಪಕ್ಷಗಳನ್ನು ಒಗ್ಗೂಡಿಸಿಕೊಂಡು ಸರ್ಕಾರ ರಚನೆ ಮಾಡಿದೆ. ಎನ್ ಪಿಪಿಯ ಕನ್ರಾಡ್ ಸಂಗ್ಮಾ ಅವರು ಇದೀಗ ಮೇಘಾಲಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Conrad Sangma,Takes Oath,Meghalaya Chief Minister