ಹೋಳಿ ಹಬ್ಬದ ಸಂಭ್ರಮ: ದೇಶದ ಜನತೆಗೆ ರಾಷ್ಟ್ರಪತಿ ಪ್ರಧಾನಿ ಶುಭಾಷಯ

ನವದೆಹಲಿ:ಮಾ-2: ಬಣ್ಣದ ಹಬ್ಬ ಹೋಳಿಯನ್ನು ದೇಶದಾದ್ಯಂತ ಸಂಭ್ರಮ-ಸಡಗರದಿಂದ ಆಚರಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ.

 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶುಭಕೋರಿರುವ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಶುಭದಿನವಾದ ಹೋಳಿ ಹಬ್ಬದ ದಿನ ಹಿನ್ನಲೆಯಲ್ಲಿ ಎಲ್ಲಾ ನಾಗರೀಕರಿಗೂ ಶುಭಾಶಯಗಳು. ಬಣ್ಣಗಳ ಹಬ್ಬ ಹೋಳಿ ನಮ್ಮ ಸಮಾಜದ ಸಾಮರಸ್ಯದ ಆಚರಣೆಯಾಗಿದೆ. ಪ್ರತೀಯೊಬ್ಬರ ಜೀವನಕ್ಕೆ ಇದು ಶಾಂತಿ, ಸಂತೋಷ ಹಾಗೂ ಸಮೃದ್ಧಿಯನ್ನು ತರಲಿ ಎಂದು ಹಾರೈಸ್ಸಿದ್ದಾರೆ.

 

ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ದೇಶದ ಜನತೆಗೆ ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದು, ದೇಶದ ಪ್ರತೀಯೊಬ್ಬರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಶುಭಕಾಮನೆಗಳನ್ನು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ