ನಲಪಾಡ್ ರೀತಿಯ ಅಪರಾಧಗಳಿಗೆ ಕಡಿವಾಣ ಬೀಳಲಿ: ಬಿಎನ್‍ಎಸ್ ರೆಡಿ ್ಡ – ಬೆಂಗಳೂರಿನ ನಾಗರಿಕರು ಇಂತಹ ಅಪರಾಧ ಕೃತ್ಯಗಳ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ – ಅಪರಾಧ ಕೃತ್ಯಗಳ ವಿರುದ್ಧದ ಹೋರಾಟಕ್ಕೆ “ಭಯಮುಕ್ತ ಬೆಂಗಳೂರು’’ ಅಭಿಯಾನಕ್ಕೆ ಚಾಲನೆ

– ಬೆಂಗಳೂರಿನ ನಾಗರಿಕರು ಇಂತಹ ಅಪರಾಧ ಕೃತ್ಯಗಳ ವಿರುದ್ಧ ಧ್ವನಿ ಎತ್ತುವ
ಸಮಯ ಬಂದಿದೆ
– ಅಪರಾಧ ಕೃತ್ಯಗಳ ವಿರುದ್ಧದ ಹೋರಾಟಕ್ಕೆ “ಭಯಮುಕ್ತ ಬೆಂಗಳೂರು’’
ಅಭಿಯಾನಕ್ಕೆ ಚಾಲನೆ

ಬೆಂಗಳೂರು, 01 ಮಾರ್ಚ್ 2018: ಯುಬಿ ಸಿಟಿಯಲ್ಲಿ ವಿದ್ವತ್ ಮೇಲೆ ನಡೆದ ಹಲ್ಲೆ ಸೇರಿದಂತೆ
ಬೆಂಗಳೂರಿನಲ್ಲಿ ಅಪರಾಧ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ
ಮೂಡಿಸುವ ನಿಟ್ಟಿನಲ್ಲಿ “ಭಯಮುಕ್ತ ಬೆಂಗಳೂರು’’ ಅಭಿಯಾನಕೆ ್ಕ ಚಾಲನೆ ನೀಡಲಾಗಿದೆ.
ಸಾರ್ವಜನಿಕರು 9019551122 ಸಂಖ್ಯೆಗೆ ಮಿಸ್ಡ್‍ಕಾಲ್ ಕೊಟ್ಟು ಈ ಅಭಿಯಾನಕ್ಕೆ ನೋಂದಣಿ
ಮಾಡಿಕೊಳ್ಳಬಹುದಾಗಿದೆ.
ಯುಬಿ ಸಿಟಿಯಲ್ಲಿ ಇತ್ತೀಚೆಗೆ ವಿದ್ವತ್ ಮೇಲೆ ಪ್ರಭಾವಿ ಶಾಸಕ ಎನ್.ಎ.ಹ್ಯಾರಿಸ್ ಪುತ್ರ
ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣ ಬೆಂಗಳೂರು ನಗರದ ಗೌರವಕ್ಕೆ ತೀವ್ರ ಧಕ್ಕೆಯನ್ನುಂಟು
ಮಾಡಿದೆ. ಈ ಪ್ರಕರಣದಿಂದ ಜನಸಾಮಾನ್ಯರ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಇಂತಹ
ಪರಿಸ್ಥಿತಿಯಲ್ಲಿ ಬೆಂಗಳೂರು ನಗರ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಖ್ಯಾತಿಯನ್ನು
ಉಳಿಸಿಕೊಂಡಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಇದಲ್ಲದೇ, ಕಾನೂನಿಗೆ
ಗೌರವವೇ ಇಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಅಬಿ üಯಾನವನ್ನು
ಆರಂಭಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಎನ್.ಎಸ್.ರೆಡ್ಡಿ ಅವರು, “ಯುಬಿ
ಸಿಟಯಲ್ಲಿ ವಿದ್ವತ್ ಮೇಲೆ ನಡೆದ ಹಲ್ಲೆ ಪ್ರಕರಣ ನನ್ನನ್ನು ಘಾಸಿಗೊಳಿಸಿದೆ. ಮಾರಣಾಂತಿಕವಾಗಿ ಹಲ್ಲೆ
ನಡೆಯುತ್ತಿದ್ದಾಗ ಯಾರೊಬ್ಬರೂ ಬಿಡಿಸಲು ಮತ್ತು ವಿದ್ವತ್‍ನನ್ನು ರಕ್ಷಿಸಲು ಹೋಗದಿರುವುದು ದಿಗ್ಭ್ರಮೆ
ಉಂಟುಮಾಡಿದೆ. ಬೆಂಗಳೂರು ನಗರದಲ್ಲಿ ಇಂತಹ ರೌಡಿಸಂ ಅನ್ನು ತಡೆಯಲು ನಾವು
ಮುಂದಾಗುತ್ತಿಲ್ಲವೇ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ’’ ಎಂದಿದ್ದಾರೆ.
ಇಂತಹ ಪ ್ರಕರಣಗಳು ಮರು ಕಳಿಸುತಿ ್ತರುವ ಹಿನ್ನೆಲೆಯಲ್ಲಿ ಮತ್ತು ಈ ಪ್ರಕರಣಗಳ ವಿರುದ್ಧ
ಹೋರಾಟ ನಡೆಸುವ ಸಂಬಂಧ “ಭಯಮುಕ್ತ ಬೆಂಗಳೂರು’’ ಅಭಿಯಾನಕ್ಕೆ ರೆಡ್ಡಿ ಅವರು ಚಾಲನೆ
ನೀಡಿದ್ದಾರೆ. ಇದರ ಪ್ರಮುಖ ಉದ್ದೇಶವೆಂದರೆ ಅಪರಾಧ ಪ್ರಕರಣಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ
ಸಾರ್ವಜನಿಕರು ಪ್ರಮುಖ ಪಾತ್ರ ವಹಿಸುವುದು ಮತ್ತು ಜವಾಬ್ದಾರಿ ಇದೆ ಎಂಬುದಾಗಿದೆ. ಈ
ಅಭಿಯಾನಕ್ಕೆ ಚಾಲನೆ ನೀಡಿದ ರೆಡ್ಡಿ ಅವರು ಮೂರು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ:-
1. ವಿದ್ವತ್ ಮೇಲೆ ಹಲ್ಲೆ ನಡೆಯುತ್ತಿರುವಾಗ ಮತ್ತು ನಂತರ ಫರ್ಜಿ ಕೆಫೆಯ ಆಡಳಿತ ಮಂಡಳಿ
ಮೌನ ಪ್ರೇಕ್ಷಕನಂತಾಗಿರುವುದು ಏಕೆ?
2. ಪಬ್‍ನಲ್ಲಿ ಬೌನ್ಸರ್‍ಗಳು ಏನು ಮಾಡುತ್ತಿದ್ದರು?
3. ಯುಬಿ ಸಿಟಿಯಲ್ಲಿ ನಿಯೋಜನೆಗೊಂಡಿದ್ದ 50 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ
ನಿಸ್ಸಾಹಯಕರಾಗಿ ಈ ಘಟನೆಯನ್ನು ನೋಡುತ್ತಾ ಇದ್ದುದು ಏಕೆ?
“ನಂಬಿಕೆ ಮತ್ತು ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಇಂತಹ ಪ್ರಕರಣಗಳ ಬಗ್ಗೆ ಜನರು
ಭಯಭೀತರಾಗುತ್ತಿದ್ದಾರೆ. ಹೀಗಾಗಿಯೇ ಜನರು ಮೊಹ್ಮದ್ ನಲಪಾಡ್ ಎಸಗಿದ ಕೃತ್ಯವನ್ನು ಮೂಕ
ಪ್ರೇಕ್ಷಕರಾಗಿ ನೋಡುತ್ತಾ ಕುಳಿತ್ತಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರು ಇಂತಹ ಪ್ರಕರಣಗಳ ವಿರುದ್ಧ
ಹೋರಾಟವನ್ನು ಮತ್ತೆ ಆರಂಭಿಸಬೇಕಿದ್ದು, ಈ ಮೂಲಕ ಕಾನೂನು, ಸುವ್ಯವಸ್ಥೆಗೆ ಗೌರವ
ತರುವಂತೆ ಮಾಡಬೇಕಿದೆ’’ ಎಂದು 35 ವರ್ಷಗಳ ಕಾಲ ಸುದೀರ್ಘ ಕಾಲದವರೆಗೆ ಪೊಲೀಸ್
ಇಲಾಖೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಮತ್ತು ಶಾಂತಿನಗರ ಪ್ರದೇಶವನ್ನೊಳಗೊಂಡ
ಬೆಂಗಳೂರು ಸೆಂಟ್ರಲ್ ವಿಭಾಗದ ಡಿಸಿಪಿಯಾಗಿಯೂ ಸೇವೆ ಸಲ್ಲಿಸಿದ ಅನುಭವ ಇರುವ ರೆಡ್ಡಿ ಅವರು
ಅಭಿಪ್ರಾಯಪಟ್ಟರು.
ಭಯಮುಕ್ತ ಬೆಂಗಳೂರು ಎಂಬ ಬೆಂಗಳೂರು ನಾಗರಿಕ ಸುರಕ್ಷೆ ಅಭಿಯಾನದ ಮೂಲಕ ನಗರದ
ನಾಗರಿಕರು ಭವಿಷ್ಯದಲ್ಲಿ ಇಂತಹ ಕುಕೃತ್ಯಗಳ ವಿರುದ್ಧ ಧ್ವನಿ ಎತ್ತಬಹುದಾಗಿದೆ. ಸಾರ್ವಜನಿಕರು
9019551122 ದೂರವಾಣಿ ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟು ಈ “ಭಯಮುಕ್ತ ಬೆಂಗಳೂರು’’
ಅಭಿಯಾನಕ್ಕೆ ನೋಂದಣಿ ಮಾಡಿಕೊಂಡು ಅಭಿಯಾನಕ್ಕೆ ಕೈಜೋಡಿಸಬಹುದಾಗಿದೆ.
ಬಿಎನ್‍ಎಸ್ ರೆಡ್ಡಿ ಅವರು ಈ ಅಭಿಯಾನದ ಬಗ್ಗೆ ವಿವರ ನೀಡಿ, “ಸಾರ್ವಜನಿಕರು ಇಂತಹ
ಪ್ರಕರಣಗಳಲ್ಲಿ ಪೊಲೀಸರು ಯಾವ ರೀತಿ ವರ್ತಿಸುತ್ತಾರೆ ಎಂಬುದು ಸೇರಿದಂತೆ ಸಮಾಜದ ಸ್ವಾಸ್ಥ್ಯಕ್ಕೆ
ಧಕ್ಕೆ ಉಂಟು ಮಾಡುವ ಪ್ರಕರಣಗಳ ವಿರುದ್ಧ ಇಲ್ಲಿ ದೂರು ಸಲ್ಲಿಸಬಹುದಾಗಿದೆ. ಈ ಅಭಿಯಾನದಲ್ಲಿ
ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದಾಗ ಮಾತ್ರ ನಾವು
ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಲು ಸಾಧ್ಯ. ಸಮಾಜದಲ್ಲಿ ಸಾರ್ವಜನಿಕರ ಸುರಕ್ಷತೆ ಅತ್ಯಂತ
ಪ್ರಮುಖವಾದ ಅಂಶವಾಗಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಸೇರಿ ಸುರಕ್ಷತೆ ಬಗ್ಗೆ ಧ್ವನಿ ಎತ್ತಬೇಕಾಗಿದೆ.
ಈ ಮೂಲಕ ಸಾರ್ವಜನಿಕರನ್ನು ಎಚ್ಚರಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಸಂಘಟಿತ
ಅಪರಾz sÀಗಳ ವಿರುದ್ಧದ ಹೋರಾಟಕ್ಕೆ ಬೆಂಗಳೂರಿನ ಎಲ್ಲಾ ಸಾರ್ವಜನಿಕರು ಕೈಜೋಡಿಸಬೇಕು’’
ಎಂದು ಕರೆ ನೀಡಿದರು.
ಸುರಕ್ಷಿತ ಬೆಂಗಳೂರು ನಿರ್ಮಾಣದ ಗುರಿಯೊಂದಿಗೆ ಈ “ಭಯಮುಕ್ತ ಬೆಂಗಳೂರು’’ ಅಭಿಯಾನ
ಕಾರ್ಯನಿರ್ವಹಿಸಲಿದೆ. ಈ ಬಗ್ಗೆ ಮಾಹಿತಿ ನೀಡಿದ ಅಭಿಯಾನದ ಸಹ-ಸಂಚಾಲಕ ಕೆರಿಯನ್
ನಾರಾಯಣನ್ ಅವರು, “ವಿವಿಧ ಪಕ್ಷಗಳು ಹಲವಾರು ರೀತಿಯ ಭರವಸೆಗಳನ್ನೊಳಗೊಂಡ
ಚುನಾವಣೆ ಪ್ರಣಾಳಿಕೆಯನ್ನು ನೀಡುತ್ತಾರೆ. ಆದರೆ, ನಾಗರಿಕರು ತಮ್ಮ ಸುರಕ್ಷತೆಯನ್ನು
ಬಯಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಜನರೊಂದಿಗೆ ಬೆರೆತು ಅವರಿಗೆ ಸುರಕ್ಷತೆ ನೀಡುವತ್ತ ಕೆಲಸ
ಮಾಡುತ್ತೇವೆ. ಈ ಅಭಿಯಾನವನ್ನು ಆರಂಭಿಸಿದ್ದು, ಮುಂದಿನ ಕೆಲವು ದಿನಗಳವರೆಗೆ
ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆಯುತ್ತೇವೆ. ನಂತರ ಸಾರ್ವಜನಿಕರಲ್ಲಿ ಧೈರ್ಯ
ತುಂಬುವ ಮತ್ತು ಅವರಿಗೆ ರಕ್ಷಣೆ ನೀಡುವಂತಹ ಒಂದು ಕ್ರಿಯಾಯೋಜನೆಯನ್ನು
ಸಿದ್ಧಪಡಿಸುತ್ತೇವೆ. ಇದು ಕೇವಲ ಯುಬಿ ಸಿಟಿಯಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ಚಾಲನೆ
ನೀಡಿರುವ ಅಭಿಯಾನವಲ್ಲ. ಈ ಘಟನೆ ಸೇರಿದಂತೆ ನಗರದಲ್ಲಿ ಹಲವಾರು ಇಂತಹ ಘಟನೆಗಳು
ನಡೆಯುತ್ತಿರುವುದರಿಂದ ನಾಗರಿಕರಲ್ಲಿ ಸುರಕ್ಷತೆಯ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ
ಅಭಿಯಾನವಾಗಿದೆ’’ ಎಂದು ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ