ಕನ್ನಡಿಗರಿಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಕಾಂಗ್ರೆಸ್ ನ ಬಸಪ್ಪ ಚಿಕ್ಕಲದಿನ್ನಿ ಮೇಯರ್ ಆಗಿ ಅವಿರೋಧ ಆಯ್ಕೆ

ಬೆಳಗಾವಿ:ಮಾ-1: ಬೆಳಗಾವಿ ಮಹಾನಗರ ಪಾಲಿಕೆ ಮತ್ತೆ ಕನ್ನಡಿಗರ ವಶವಾಗಿದೆ. ಪರಿಶಿಷ್ಠ ಜಾತಿಗೆ ಮೀಸಲಾದ ಮೇಯರ್‌ ಹುದ್ದೆಗೆ ಕನ್ನಡಿಗ ಕಾಂಗ್ರೆಸ್‌ ಸದಸ್ಯ ಬಸಪ್ಪ ಚಿಕ್ಕಲದಿನ್ನಿ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ. ಈ ಮೂಲಕ ಬೆಳಗಾವಿ ಪಾಲಿಕೆಗೆ ಐದನೇ ಕನ್ನಡದ ಮೇಯರ್‌ ಆಯ್ಕೆಯಾಗಿದ್ದಾರೆ.

58 ಸದಸ್ಯ ಬಲದ ಪಾಲಿಕೆಯಲ್ಲಿ 32 ಸದಸ್ಯ ಬಲದ ಹೊಂದಿದ್ದ ಎಂಇಎಸ್‌ ಬಳಿ ಎಸ್‌ಟಿ ಮೀಸಲಾತಿ ಹೊಂದಿದ ಸದಸ್ಯರಿಲ್ಲದ ಕಾರಣ ಕನ್ನಡಿಗರಿಗೆ ಮೇಲುಗೈ ಆಗಲು ಸಾಧ್ಯವಾಗಿದೆ.

ಚುನಾವಣಾಧಿಕಾರಿ ಮೇಘಣ್ಣನವರ್‌ ಅವರು ಬಸಪ್ಪ ಚಿಕ್ಕಲದಿನ್ನಿ ಅವರು ಆಯ್ಕೆಯಾಗಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಬಸಪ್ಪ ಅವರಿಗೆ ಕಾಂಗ್ರೆಸ್‌ನ ಇನ್ನೋರ್ವ ಎಸ್‌ಟಿ ಮೀಸಲಾತಿ ಹೊಂದಿದ್ದ ಸದಸ್ಯೆ ಸುಚೇತನಾ ತೀವ್ರ ಪೈಪೋಟಿ ನೀಡಿದ್ದರಾದರೂ ಅವಿರೋಧ ಆಯ್ಕೆ ಸಾಧ್ಯವಾಗಿದೆ.

ಕನ್ನಡಿಗ ಮೇಯರ್‌ ಆಯ್ಕೆಯಾದುದಕ್ಕೆ ಕನ್ನಡ ಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

belgaum-city-corporation,mayor,kannadiga

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ