
ನವದೆಹಲಿ:ಫೆ-24: ಭಾರತ ಪ್ರವಾಸದಲ್ಲಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ದೆಹಲಿಯಲ್ಲಿನ ಕೆನಡಾ ಹೈಕಮಿಷನ್ನಲ್ಲಿ ಹಾಕಿ ಪಂದ್ಯ ವೀಕ್ಷಿಸಿದರು.
ಮಹಿಳಾ ಕ್ರೀಡಾಪಟುಗಳ ಹಾಕಿ ಪಂದ್ಯ ವೀಕ್ಷಿಸಿದ ಬಳಿಕ, ಎಲ್ಲಾ ಕ್ರೀಡಾಪಟುಗಳಿಗೆ ಕ್ರೀಡಾ ಸಮವಸ್ತ್ರವನ್ನು ಜಸ್ಟಿನ್ ಟ್ರುಡೊ ದಂಪತಿ ವಿತರಿಸಿ, ಶುಭಕೋರಿದರು.
ಜಸ್ಟಿನ್ ಟ್ರುಡೊ ಅವರು ಪತ್ನಿ ಸೋಫಿ ಗ್ರಗೋರಿ ಹಾಗೂ ಮಕ್ಕಳ ಜತೆಗೂಡಿ ಒಂದು ವಾರಕಾಲ ಭಾರತ ಪ್ರವಾಸ ಕೈಗೊಂಡಿದ್ದಾರೆ. ಪ್ರವಾಸ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೊದಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೇರಿದಂತೆ ವಿವಿಧ ಗಣ್ಯರನ್ನು ಭೇಟಿ ಮಾಡಿ ಚರ್ಚೆ ಮಾತುಕತೆ ನಡೆಸಿದ್ದಾರೆ.
Canadian Prime Minister JustinTrudeau, attends,Hockey event,Canadian High Commission in Delhi.