ರಾತ್ರಿ ಜನಿಸಿದ ಮಗು ಬೆಳಗಾಗುವಷ್ಟರಲ್ಲಿ ನಾಪತ್ತೆ: ಕೋಲಾರದ ಆಸ್ಪತ್ರೆಯಲ್ಲಿ ಘಟನೆ

ಕೋಲಾರ :ಫೆ-24: ರಾತ್ರಿ ಹುಟ್ಟಿದ ಮಗುವನ್ನು ಬೆಳಗಾಗುವಷ್ಟರಲ್ಲಿ ನಾಪತ್ತೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಚಲ್ದೀಗಾನಹಳ್ಳಿ ನಿವಾಸಿ ರವಿ ಹಾಗೂ ಮಾಲಾ ದಂಪತಿಗಳಿಗೆ ಶುಕ್ರವಾರ ರಾತ್ರಿ 9 ಗಂಟೆಗೆ ಗಂಡು ಮಗು ಹುಟ್ಟಿದ್ದು, ತಡರಾತ್ರಿ 1 ಗಂಟೆಯ ವೇಳೆ ತಾಯಿ ಮಡಿಲಲ್ಲಿ ಇದ್ದ ಶಿಶುವನ್ನು ಇಬ್ಬರು ಅಪರಿಚಿತರು ಕಳವು ಮಾಡಿ ಪರಾರಿಯಾಗಿದ್ದಾರೆ.

ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆಸ್ಪತ್ರೆ ಆಡಳಿತ ಮಮ್ದಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮಗು ಹುಡುಕಿ ಕೊಡುವಂತೆ ಪಟ್ಟು ಹಿಡಿದಿದ್ದಾರೆ.

ರಾರ್ಬಟ್ ಸನ್ ಪೇಟೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮಗುವನ್ನು ಕದ್ದೊಯ್ದವರ ಬಗ್ಗೆ ಹುಡುಕಾಟನಡೆಸಲಾಗುತ್ತಿದೆ.

kolar, KGF Government Hospital,New born baby,missing

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ