ಬೆಂಗಳೂರು, ಫೆ.22-ರಾಜ್ಯದಲ್ಲಿ 363 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‍ಗೆ ತಿಳಿಸಿದರು.
ಪ್ರಶ್ನೋತ್ತರ ಕಲಾಪದಲ್ಲಿ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮ ವಲಸಿಗರಿಂದ ರಾಜ್ಯದ ಆಂತರಿಕ ಭದ್ರತೆಗೆ ಧಕ್ಕೆಯಾಗದಂತೆ ಪೆÇಲೀಸ್ ಇಲಾಖೆ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಇಲಾಖೆಯಲ್ಲಿ ಪ್ರತ್ಯೇಕ ಆಂತರಿಕ ಭದ್ರತಾ ವಿಭಾಗವಿದೆ. ಅಕ್ರಮ ವಲಸಿಗರು ಆಶ್ರಯ ಪಡೆದಿರುವುದನ್ನು ನಿಯಂತ್ರಿಸಲು ಎಲ್ಲಾ ನಗರ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಪೆಷಲ್ ಟಾಕ್ಸ್‍ಫೆÇೀರ್ಸ್ ರಚಿಸಿದ್ದು, ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸ್ಥಳೀಯ ಪೆÇಲೀಸರು ಮತ್ತು ಸ್ಪೆಷಲ್ ಟಾಕ್ಸ್‍ಫೆÇೀರ್ಸ್ ಸಿಬ್ಬಂದಿ ನಿರಂತರವಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದರು.
ಅನಧಿಕೃತವಾಗಿ ನೆಲೆಸಿರುವ ವಿದೇಶಿಯರು ವಿಮಾನ ನಿಲ್ದಾಣ, ಬಂದರು ಅಥವಾ ಭೂಮಾರ್ಗವಾಗಿ ದೇಶವನ್ನು ತೊರೆಯಲು ಸಾಧ್ಯವಾಗದಂತೆ ಲುಕ್ ಔಟ್ ಸಕ್ರ್ಯೂಲರ್ ಹೊರಡಿಸಲಾಗುತ್ತದೆ. ಅಂತಹ ವಿದೇಶಿಯರನ್ನು ಗುರುತಿಸಿದ ತಕ್ಷಣ ಅವರ ವಿರುದ್ಧ ಲೀವ್ ಇಂಡಿಯಾ ನೋಟೀಸ್ ಹೊರಡಿಸಿ ಕ್ರಮ ವಹಿಸಲಾಗುತ್ತದೆ.
ಕೇಂದ್ರ ಸರ್ಕಾರದ ಕಾಯ್ದೆಯಂತೆ ಅನಧಿಕೃತವಾಗಿ ವಾಸವಿದ್ದ ದಿನಗಳಿಗೆ ದಂಡ ವಿಧಿಸಿ ಆ ದಿನಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಒಂದು ವೇಳೆ ವಿದ್ಯಾರ್ಥಿ ವೀಸಾಡಿಯಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಗರಾದಲ್ಲಿ ಅವರು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾಸಂಸ್ಥೆಯ ಪ್ರಾಧಿಕಾರದ ಗಮನಕ್ಕೆ ತಂದು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಅಕ್ರಮ ವಲಸಿಗರು ಹೆಚ್ಚಾಗುತ್ತಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಮುಂತಾದ ಕಡೆ ಇವರ ಹಾವಳಿ ತೀವ್ರವಾಗಿದೆ ಎಂದು ಪ್ರಾಣೇಶ್, ಶರವಣ ಅವರು ಸಚಿವರ ಗಮನ ಸೆಳೆದಾಗ ಎಲ್ಲಾ 30 ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಿ ಡಿಸೆಂಬರ್ ಒಳಗೆ ವರದಿ ನೀಡುವಂತೆ ಎಲ್ಲಾ ಎಸ್ಪಿಗಳಿಗೆ ಸೂಚನೆ ನೀಡಿದ್ದೆ. ಅವರು ಪರಿಶೀಲಿಸಿ ನೀಡಿರುವ ವರದಿ ಪ್ರಕಾರ 363 ಮಂದಿ ಅಕ್ರಮವಾಗಿ ನೆಲೆಸಿದ್ದಾರೆ. ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ.
ಮಿಜೋರಾಂ, ಅಸ್ಸೋಂ, ಮೇಘಾಲಯ, ಮಣಿಪುರ ಸೇರಿದಂತೆ ನಮ್ಮ ದೇಶದ ಬೇರೆ ರಾಜ್ಯಗಳ ಜನರು ಇಲ್ಲಿ ನೆಲೆಸಿದ್ದಾರೆ. ಕೆಲವರು ಕನ್‍ಫ್ಯೂಸ್ ಮಾಡಿಕೊಳ್ಳುತ್ತಾರೆ, ಆದರೆ ಬಾಂಗ್ಲಾ ನುಸುಳುಕೋರರನ್ನು ಆಯಾ ರಾಜ್ಯಗಳು, ಕೇಂದ್ರಸರ್ಕಾರ ತಡೆಗಟ್ಟಬೇಕು. ಅವರು ಬರುವಾಗಲೇ ಪಶ್ಚಿಮ ಬಂಗಾಳ, ಇತರೆ ರಾಜ್ಯಗಳಿಂದ ಆಧಾರ್ ಕಾರ್ಡ್ ಇನ್ನಿತರ ದಾಖಲೆಗಳನ್ನು ತೆಗೆದುಕೊಂಡು ಬರುತ್ತಾರೆ. ಅದಾಗ್ಯೂ ನಾವು ಇಲ್ಲಿ ಮತ್ತೊಮ್ಮೆ ಪರಿಶೀಲನೆ ಮಾಡುತ್ತೇವೆ ಎಂದು ಸಚಿವರು ತಿಳಿಸಿದರು.