ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಮೇಲಿನ ಬೇನಾಮಿ ಆಸ್ತಿ ಹೊಂದಿರುವ ಆರೋಪದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು

ಬೆಂಗಳೂರು, ಫೆ.22- ಗೃಹ ಸಚಿವ ರಾಮಲಿಂಗಾರೆಡ್ಡಿ ಅವರ ಮೇಲಿನ ಬೇನಾಮಿ ಆಸ್ತಿ ಹೊಂದಿರುವ ಆರೋಪದ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು.

ಸದನ ಸಮಾವೇಶವಾಗುತ್ತಿದ್ದಂತೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಾ, ಗೃಹ ಸಚಿವರ ಮೇಲೆ ಆಪಾದನೆ ಬಂದಿದ್ದು, ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಇದಕ್ಕೆ ಆಕ್ಷೇಪ ವೆತ್ತಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ರಿಕೆ ವರದಿ ಆಧರಿಸಿ ದಾಖಲೆ ಇಲ್ಲದೆ ನಿಲುವಳಿ ಸೂಚನೆ ನೋಟಿಸ್ ಕೊಟ್ಟಿದ್ದಾರೆ. ನಾವು ಲಘುವಾಗಿ ಮಾತನಾಡುವುದಿಲ್ಲ. ದಾಖಲೆ ಇಲ್ಲದೆ ಬೇನಾಮಿ ಹೆಸರು ಹೇಳುತ್ತಾರೆ. ಇದರ ಬಗ್ಗೆ ಹೇಗೆ ಚರ್ಚೆ ಮಾಡುವುದು ಎಂದು ಆಕ್ಷೇಪಿಸಿದರು.

ಶೆಟ್ಟರ್ ಮಾತನಾಡಿ, ದಾಖಲೆ ಅಧ್ಯಯನ ಮಾಡಿ ವಿಷಯ ಪ್ರಸ್ತಾಪಿಸಿದ್ದು, ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದರು. ಶೆಟ್ಟರ್ ಅವರ ನಿಲುವನ್ನು ಬಿಜೆಪಿ ಶಾಸಕ ವಿಶ್ವೇಶ್ವರಹೆಗಡೆ ಕಾಗೇರಿ ಬೆಂಬಲಿಸಿದರು.

ನಂತರ ಸಭಾಧ್ಯಕ್ಷರು ಈ ವಿಚಾರವನ್ನು ಪ್ರಶ್ನೋತ್ತರ ಹಾಗೂ ಶೂನ್ಯವೇಳೆಯ ನಂತರ ಪ್ರಸ್ತಾಪಿಸಲು ಅವಕಾಶ ನೀಡುವುದಾಗಿ ಹೇಳಿದನಂತರ ಚರ್ಚೆಗೆ ತೆರೆ ಬಿದ್ದಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ