ಮರಳು ಗುತ್ತಿಗೆದಾರರು ನಿಯಮಬಾಹಿರವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ

ಚಳ್ಳಕೆರೆ,ಫೆ.18- ಮರಳು ಗುತ್ತಿಗೆದಾರರು ನಿಯಮಬಾಹಿರವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಯುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಹೆಚï.ಎನï. ಆದರ್ಶï ಆರೋಪಿಸಿದ್ದಾರೆ.

ತಾಲ್ಲೂಕಿನ ಗಡಿ ಭಾಗದಲ್ಲಿ ಹರಿಯುವ ವೇದಾವತಿ ನದಿ ತೀರದಲ್ಲಿ ಬರುವ ಕೆಲವು ಗ್ರಾಮಗಳಲ್ಲಿ, ಸರ್ಕಾರ ಇ- ಟೆಂಡರ್ ಮೂಲಕ ಮರಳು ಹರಾಜಿಗೆ ಅನುಮತಿ ನೀಡಿದೆ. ಆದರೆ ಹರಾಜು ಪಡೆದವರು ನಿಯಮ ಉಲ್ಲಂಘಿಸಿ ಪ್ರತಿ ಟನ್ ಮರಳಿಗೆ ಹೆಚ್ಚು ದರ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಕಲಮರಹಳ್ಳಿ ಭಾಗ-1ರಲ್ಲಿ ಪ್ರತಿ ಮೆಟ್ರಿಕï ಟನï ಗೆ ಸರ್ಕಾರ 301 ರೂ ನಿಗದಿಪಡಿಸಿದೆ ಆದರೆ, ಗುತ್ತಿಗೆದಾರರು ಪ್ರತಿ ಮೆಟ್ರಿಕï ಟನï ಮರಳಿಗೆ 1200 ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಮರಳನ್ನು ನಿಗದಿತ ಸ್ಥಳಗಳಲ್ಲಿ ಮಾತ್ರ ಮಾರಾಟ ಮಾಡಲು ಸರ್ಕಾರದ ನಿಯಮವಿದ್ದರೂ ಗುತ್ತಿಗೆದಾರರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ಕಡೆ ಮಾರಾಟ ಮಾಡುತ್ತಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ವಿಚಾರಿಸಿದರೆ ಸರಿಯಾದ ಮಾಹಿತಿ ನೀಡದೇ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕೂಡಲೆ ಇಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ