ರಾಜಕೀಯ ರಂಗದಲ್ಲಿ ನಕಲಿ ನಾಯಕರ ಬಣ್ಣ ಬದಲಿಸುವ ಶಕ್ತಿ ಪತ್ರಿಕೆಗಳಿಗೆ ಇದೆ – ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ

ಮಾಗಡಿ,ಫೆ.18- ರಾಜಕೀಯ ರಂಗದಲ್ಲಿ ನಕಲಿ ನಾಯಕರ ಬಣ್ಣ ಬದಲಿಸುವ ಶಕ್ತಿ ಪತ್ರಿಕೆಗಳಿಗೆ ಇದೆ ಎಂದು ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅಭಿಪ್ರಾಯಪಟ್ಟರು.

ಆಭರಣ ಸುದ್ದಿ ಪತ್ರಿಕೆಯ 31 ನೇ ವಾರ್ಷಿಕೋತ್ಸವದ ಅಂಗವಾಗಿ ಮಾಗಡಿ ಬಳಗದ ವತಿಯಿಂದ ನಡೆದ ಪತ್ರಿಕೆಯ ವಿಶೇಷಾಂಕ ಮತ್ತು ಇತರೆ ಮೂರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಪತ್ರಿಕೆಗಳು ಸರಿಯಾಗಿ ಕೆಲಸ ಮಾಡದಿದ್ದರೆ ಪ್ರಜಾಪ್ರಭುತ್ವ ಕ್ಷೀಣಿಸುತ್ತದೆ. ಸತ್ಯವನ್ನು ಜನರಿಗೆ ತಿಳಿಹೇಳಿ, ಅನ್ಯಾಯದ ವಿರುದ್ಧ ಪ್ರತಿಭಟಿಸುವಂತೆ ಜನರನ್ನು ಅಣಿಗೊಳಿಸಬೇಕಾದ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.

31 ವರ್ಷಗಳ ಕಾಲ ಗ್ರಾಮಾಂತರ ಪತ್ರಿಕೆಯೊಂದು ಜನರ ಸಮಸ್ಯೆಗಳನ್ನು ಪರಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ. ಎಲ್ಲರೂ ಪತ್ರಿಕೆಗಳನ್ನು ಕೊಂಡು ಓದಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ದಿವ್ಯಸಾನಿದ್ಯವಹಿಸಿದ್ದ ಆದಿಚುಂಚನಗಿರಿ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಪತ್ರಿಕಾರಂಗವೂ ಸಹ ತನ್ನ ಧರ್ಮವನ್ನು ಪಾಲಿಸುವುದರ ಜೊತೆಗೆ ರೈತಾಪಿ ವರ್ಗದವರ ಮತ್ತು ಬಡವರ ಬದುಕಿಗೆ ಪೂರಕವಾದ ವಿಷಯಗಳಿಗೆ ಒತ್ತುನೀಡಬೇಕು ಎಂದರು.

ಲೇಖಕ ಕೋಡಿ ಪಾಳ್ಯಕೃಷ್ಣಪ್ಪರಚನೆ ಮಾಸ್ಟರ್ ರೇವಣ್ಣ ಅಭಿನಂದನ ಗ್ರಂಥ, ಶತಕದತ್ತ ಅಭಿನಂದನ ಕೃತಿ, ಹಿಡಿದವನು ನಕ್ಕಾನು ಬಿಟ್ಟವನು ಅತ್ತಾನು, ಆಧ್ಯಾತ್ಮಿಕ ಕೃತಿ ಮತ್ತು ಶಾರದನಾರಾಯಣರ ಕವನ ಸಂಕಲನ ಲೋಕಾರ್ಪಣೆ ಮಾಡಲಾಯಿತು.

ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರನ್ನು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸನ್ಮಾನಿಸಿದರು. ಮಾಸ್ಟರ್ ರೇವಣ್ಣ,ಕಲಾವಿದ ಆಂಜನೇಯ, ಸಹಕಾರಿ ರತ್ನ ಸುಧಾಕರ್, ನಿವೃತ್ತ ಡಿವೈಎಸ್‍ಪಿ ಎಚ್.ರುದ್ರಪ್ಪ, ಪುಟ್ಟಹಲಗಯ್ಯ, ಎಂ.ಜಿ.ಶಿವಲಿಂಗಯ್ಯ, ಪ್ರಗತಿಪರರಾದ ರೈತ ಅಂಚೆಪಾಳ್ಯ ರಮೇಶ್, ಕಾಂತರಾಜ್ ಪಟೇಲ್ ಅವರನ್ನು ಈ ವೇಳೆ ಸನ್ಮಾನಿಸಲಾಯಿತು.

ವಿಮರ್ಷಕ ಡಾ,ಭೆರಮಂಗಲ ರಾಮೇಗೌಡ, ಬಿ.ಜೆ.ಪಿ.ಮುಖಂಡ ಆ.ದೇವೇಗೌಡ, ಕೃಷಿ ವಿವಿಯ ವಿಶ್ರಾಂತ ಉಪಕುಲಪತಿ ಡಾ,ನಾರಾಯಣಗೌಡ, ಪತ್ರಿಕೆಯ ಸಂಪಾದಕ ತ್ಯಾಗರಾಜು ಇದ್ದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ