ಸ್ವಾಭಿಮಾನಿ ಸಮಾವೇಶದಲ್ಲಿ ಕ್ಷೇತ್ರದ ಜನತೆ ಯುವಶಕ್ತಿ ತಮ್ಮ ಪರ ಪ್ರದರ್ಶನ ಮಾಡಬೇಕು – ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್

ಚಿಂತಾಮಣಿ, ಫೆ.18- ನಗರದ ಚೇಳೂರು ರಸ್ತೆಯಲ್ಲಿ ಕತ್ತಲಿನಿಂದ ಬೆಳಕಿನೆಡೆಗೆ ಅವನತಿಯಿಂದ ಅಭಿವೃದ್ಧಿಯೆಡೆಗೆ ಎಂಬ ಸ್ವಾಭಿಮಾನಿ ಸಮಾವೇಶವನ್ನು ಫೆ.25ರಂದು ಹಮ್ಮಿಕೊಂಡಿದ್ದು, ಈ ಸಮಾವೇಶದಲ್ಲಿ ಕ್ಷೇತ್ರದ ಜನತೆ ಯುವಶಕ್ತಿ ತಮ್ಮ ಪರ ಪ್ರದರ್ಶನ ಮಾಡಬೇಕೆಂದು ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಹೇಳಿದರು.

ತಾಲೂಕು ಕೈವಾರ ಹೋಬಳಿ ಮಸ್ತೇನಹಳ್ಳಿ ಗ್ರಾಪಂನ ಜಂಗಮ ಸೀಗೆಹಳ್ಳಿ ಗ್ರಾಮದಲ್ಲಿ ಗೋಲ್ಡನ್ ಬಾಯ್ಸ್ ಯುವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಯವ ಸಮಾವೇಶದಲ್ಲಿ ಮಾತನಾಡಿದರು.

ಗ್ರಾಮೀಣ ಮತ್ತು ನಗರ ಭಾಗದ ಯುವಕರನ್ನೇ ಗಮನದಲ್ಲಿಟ್ಟುಕೊಂಡು ಅವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಸಿಗಲು 2010ರಲ್ಲಿ ಕೈವಾರ ಹೋಬಳಿ ಮಸ್ತೇನಹಳ್ಳಿಯಲ್ಲಿಲ್ಲಿ ಸುಮಾರು 592 ಎಕರೆ ಹುಡುಕಿ ಕೈಗಾರಿಕಾ ಸ್ಥಾಪನೆಗಾಗಿ ವ್ಯವಸ್ಥೆ ಕಲ್ಪಿಸಿದ್ದೆ. ಅ ಸಮಯದಲ್ಲಿ ಮಸ್ತೇನಹಳ್ಳಿ ಮತ್ತು ವೇಮಗಲ್ ಎರಡು ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಅನುಮತಿ ಸಿಕ್ಕಿತ್ತು ಎಂದರು.

ಈಗ ಕೈಗಾರಿಕೆ ಸ್ಥಾಪನೆಯಾಗಿ ಅಲ್ಲಿನ ಯುವಕರಿಗೆ ಕೆಲಸ ಸಿಗುತ್ತಿದೆ. ಆದರೆ ಮಸ್ತೇನಹಳ್ಳಿಯಲ್ಲಿ ಕೈಗಾರಿಕೆ ಸ್ಥಾಪನೆ ಜಾಗದಲ್ಲಿ ಒಂದು ಇಟ್ಟಿಗೆ ಇಡುವ ಯೋಚನೆ ಶಕ್ತಿ ಈಗಿನ ಶಾಸಕರಿಗಿಲ್ಲ ಇತ್ತ ಗಮನಕೂಡ ಹರಿಸಿಲ್ಲವೆಂದು ಹಾಲಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ವಿರುದ್ಧ ಹರಿಹಾಯ್ದರು.

ನಾನು ಯಾವುದೇ ಗುತ್ತಿಗೆದಾರರಿಂದ ಹಣ ತೆಗೆದುಕೊಳ್ಳುವುದಿಲ್ಲ, ಕೊಡುವುದಿಲ್ಲ, ತಿನ್ನುವುದೂ ಇಲ್ಲ. ಆ ಸಂಸ್ಕøತಿ ನನ್ನದಲ್ಲ. ನನ್ನ ಅವಧಿಯಲ್ಲಿ ಗುತ್ತಿಗೆದಾರರು ಕೋಟ್ಯಾಂತರ ಅನುದಾನದಿಂದ ಕೆಲಸ ನಿರ್ವಹಿಸಿದ್ದಲ್ಲದೆ ನಾನು ಯಾರ ಬಳಿಯು ಕೈ ಚಾಚಿಲ್ಲ. ಅಂತಹ ಸಂಸ್ಕøತಿ ನನ್ನದಲ್ಲ. ಅದು ಹಾಲಿ ಶಾಸಕರ ಸಂಸ್ಕøತಿ ಎಂದು ಜೆ.ಕೆ.ಕೃಷ್ಣಾರೆಡ್ಡಿ ಹೆಸರು ಹೇಳದೆ ಅರೋಪಿಸಿದರು.

ಅಭಿವೃದ್ದಿ ಚಿತ್ರ ಬಿಡುಗಡೆ: ನಮ್ಮ ಕುಟುಂಬದ ನಮ್ಮ ತಾತ ದಿ.ಆಂಜನೇಯರೆಡ್ಡಿ ನಮ್ಮ ತಂದೆ ಮಾಜಿ ಸಚಿವ ಎ.ಚೌಡರೆಡ್ಡಿ ಮತ್ತು ನಾನು 2004 ರಿಂದ 2013ರವರೆಗೂ ಶಾಸಕನಾಗಿದ್ದು ನಮ್ಮ ತಂದೆ ತಾತ ಮತ್ತು ನಮ್ಮ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಗಳ ಬಗ್ಗೆ ಫೆ.25ರಂದು ನಡೆಯುವ ಸ್ವಾಭಿಮಾನಿ ಸಮಾವೇಶದಲ್ಲಿ ಕಿರು ಚಿತ್ರ ಬಿಡುಗಡೆ ಮಾಡುತ್ತಿದ್ದೇನೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ಚಿನ್ನಪ್ಪ, ಮುಖಂಡ ಮುನಿ ನಾರಾಯಣಪ್ಪ ಮತ್ತಿತರರು ಮಾತನಾಡಿದರು. ಸಭೆಯಲ್ಲಿ ಜಿಪಂ ಸದಸ್ಯರಾದ ಶಿವಣ್ಣ, ಶ್ರೀನಿವಾಸ, ಪವಿತ್ರ ಚಂದ್ರಶೇಖರ್, ತಾಪಂ ಸದಸ್ಯ ಡಾಬಾ ನಾಗರಾಜ್, ಎಪಿಎಂಸಿ ಸದಸ್ಯ ಚಲಪತಿ ಸಭೆಯಲ್ಲಿ ಉಪಸ್ಥಿತರಿದ್ದರು.

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ