ಪ್ರತಿಯೊಂದು ಕುಟುಂಬದವರು ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕು

ಹನೂರು, ಫೆ.18- ಸ್ವಚ್ಛ ಭಾರತ್ ಯೋಜನೆಯಡಿ ಪ್ರತಿಯೊಂದು ಕುಟುಂಬದವರು ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಯ್ಯ ಹೇಳಿದರು.

ಕ್ಷೇತ್ರ ವ್ಯಾಪ್ತಿ ಸಿಂಗಾನಲ್ಲೂರು ಗ್ರಾ.ಪಂ. ಆವರಣ ಏರ್ಪಡಿಸಲಾಗಿದ್ದ, ಎರಡನೇ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜನರ ಆರೋಗ್ಯ ಮತ್ತು ಉತ್ತಮ ಪರಿಸರಕ್ಕಾಗಿ ಸ್ವಚ್ಛ ಭಾರತ್ ಯೋಜನೆಯನ್ನು ಜಾರಿಗೆ ತಂದಿದೆ. ಪ್ರತಿಯೊಬ್ಬರು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದಿಂದ ಪ.ಜಾತಿಗೆ 15,000 ರೂ ಮತ್ತು ಸಾಮಾನ್ಯ ವರ್ಗಕ್ಕೆ 12,000 ರೂ. ಧನ ಸಹಾಯ ನೀಡಲಾಗುತ್ತದೆ ಎಂದರು.

ತಾಲ್ಲೂಕು ಸಂಯೋಜಕ ಮನೋಹರ್ ಮಾತನಾಡಿ, ರೈತರು ಹಾಗೂ ಸಾರ್ವಜನಿಕರು ಕೃಷಿ ಆಧಾರಿತ ಜಮೀನು ಸಮತಟ್ಟು, ಕೃಷಿಹೊಂಡ, ಕೊಟ್ಟಿಗೆ ಕಾಮಾಗಾರಿಗಳಿಗೆ ಹೆಚ್ಚು ಒತ್ತು ನೀಡಿದರೆ ಭೂಮಿಯೂ ಶುದ್ದವಾಗುತ್ತದೆ. ನಿಮಗೂ ಕೂಲಿ ಹಣ ದೊರೆಯುತ್ತದೆ ಎಂದರು.

2017-18ನೇ ಸಾಲಿನಲ್ಲಿ ಗ್ರಾ.ಪಂ.ವ್ಯಾಪ್ತಿ 29 ಕಾಮಾಗಾರಿ ಕೈಗೆತ್ತಕೊಳ್ಳಲಾಗಿದೆ. ಕೂಲಿ ಮೊತ್ತ 17,86,997 ರೂ. ಸಾಮಾಗ್ರಿ ಮೊತ್ತ 14,07,362 ರೂ. ಒಟ್ಟು 31,94,354 ರೂ. ಆಗಿದ್ದು, ಕಾಮಗಾರಿಗಳು ಮುಂದುವರಿದಿವೆ. ಕೂಲಿ ಕಾರ್ಮಿಕರ ಖಾತೆ ಹಣ ನೇರವಾಗಿ ಜಮೆಯಾಗಿದೆ. ಹಣ ಬಾರದಿರುವುದು, ಕಾಮಾಗಾರಿಯಲ್ಲಿ ಲೋಪ ದೋಷ ಇದ್ದರೆ ಸಭೆಯಲ್ಲಿ ಮಂಡಿಸಬಹುದು ಎಂದು ತಿಳಿಸಿದರು.

ನೋಡೆಲ್ ಅಧಿಕಾರಿ ಮಂಜುಳ, ಪಿಡಿಒ ಪುಷ್ಪಲತಾ, ಉಪಾಧ್ಯಕ್ಷ ಮಲ್ಲೇಶ್, ಸದಸ್ಯರಾದ ರಾಜು, ಚಿನ್ನಮುತ್ತು, ವೆಂಕಟೇಶ್, ಲೀಲಾವತಿ, ಗಿಡ್ಡಮ್ಮ, ಸಿದ್ದಮ್ಮ, ಕರವಸೂಲಿ ಪ್ರಭುಸ್ವಾಮಿ, ತಾ.ಸಂ.ಯೋಜಕ ಮನೋಹರ್, ಸಂಪನ್ಮೂಲ ವ್ಯಕ್ತಿ ಕಾಮಗೆರೆ ರಾಜು, ಗ್ರಾಮಸ್ಥರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ