
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‍ಗೆ 11.300 ಕೋಟಿ ರೂ ವಂಚನೆ ಮಾಡಿ ಪರಾರಿಯಾಗಿರುವ ನೀರವ್ ಮೋದಿ ಎಲ್ಲಿದ್ದಾರೆ ಎಂಬುದನ್ನು ವಿದೇಶಾಂಗ ಇಲಾಖೆ ಪತ್ತೆ ಹಚ್ಚಿದೆ.
ನ್ಯೂಯಾರ್ಕ್‍ನ ಹೋಟೆಲ್‍ವೊಂದರಲ್ಲಿ ನೀರವ್ ಮೋದಿ ತಲೆಮರೆಸಿಕೊಂಡಿರುವುದು ತಿಳಿದುಬಂದಿದೆ. ಈ ಬಗ್ಗೆ ಅಮೆರಿಕ ಅಧಿಕಾರಿಗಳೊಂದಿಗೆ ಭಾರತದ ವಿದೇಶಾಂಗ ಸಚಿವಾಲಯ ನಿರಂತರ ಸಂಪರ್ಕದಲ್ಲಿದೆ.
ಹಗರಣ ಬೆಳಕಿಗೆ ಬರುವ ಮುನ್ನವೇ ಜನವರಿಯಲ್ಲೇ ಕುಟುಂಬ ಸಮೇತರಾಗಿ ನೀರವ್ ಮೋದಿ ವಿದೇಶಕ್ಕೆ ಹಾರಿದ್ದಾರೆ. ಸದ್ಯ ನೀರವ್ ಮೋದಿ ಹಾಗೂ ಸಹೋದ್ಯೋಗಿ ಅಂಕಲ್ ಮೆಹುಲ ಚೌಕಾಸಿಯ ನಾಲ್ಕು ವಾರಗಳ ಕಾಲ ಪಾಸ್‍ಪೋರ್ಟ್ ರದ್ದುಗೊಳಿಸಲಾಗಿದೆ.
SAMACHAR NETWORK