ಮೋದಿಜೀ ಕಥೆ ಹೇಳಬೇಡಿ ಯುವ ಜನರಿಗೆ ಉತ್ತರ ಕೊಡಿ

ರಾಯಚೂರು-ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದ್ದು, ದೇಶದ ಪ್ರಧಾನ ಮಂತ್ರಿಗಳೇ ಉದ್ಯೋಗ ಸೃಷ್ಠಿಸಿ ಕಥೆ ಹೇಳಬೇಡಿ ದೇಶದ ಯುವ ಜನರಿಗೆ ಉತ್ತರ ಕೊಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

ಜನಾಶೀರ್ವಾದ ಯಾತ್ರೆಯ ಹಿನ್ನೆಲೆ ನಗರದ ಗಂಜ್ ವೃತ್ತದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ ಪೈಪೋಟಿ ನೀಡುವ ಚೀನಾ ಪ್ರತಿ ದಿನಕ್ಕೆ 50ಸಾವಿರ ಉದ್ಯೋಗ ಸೃಷ್ಠಿಸುತ್ತಿದ್ದು ಕೇಂದ್ರ ಸರ್ಕಾರ ಕೇವಲ 450 ಉದ್ಯೋಗ ಸೃಷ್ಠಿ ಮಾಡುತ್ತಿದೆ. ಇದಕ್ಕಿಂತ ಹೆಚ್ಚು ನಮ್ಮ ಸಿದ್ದರಾಮಯ್ಯ ಸರ್ಕಾರ ಸೃಷ್ಠಿ ಮಾಡುತ್ತಿದೆ.

ಪ್ರಧಾನಿ ಮೋದಿಯವರು ಒಳ್ಳೆಯ ಭಾಷಣಕಾರರೆಂದು ಎಲ್ಲರಿಗೂ ತಿಳಿದ ವಿಷಯ ಭಾಷಣ ಮಾಡಬೇಡಿ ಉದ್ಯೋಗ ಸೃಷ್ಠಿಗೆ ಕ್ರಮ ಕೈಗೊಳ್ಳಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರಧಾನ ಮಂತ್ರಿಗಳು ತಮ್ಮ ಅಕ್ಕ ಪಕ್ಕ ಕುಳಿತವರ್ಯಾರು ಎಂಬುದನ್ನು ಮೊದಲು ಅರಿತುಕೊಳ್ಳಿ. ಯಡಿಯೂರಪ್ಪ, ಸೇರಿದಂತೆ ಅವರ ಸಚಿವ ಸಂಪುಟದ ಸಚಿವರು ಭ್ರಷ್ಠಾಚಾರ ನಡೆಸಿ ಜೈಲಿಗೆ ಹೋಗಿ ಬಂದವರು. ಅಲ್ಲದೆ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು 50ಸಾವಿರವನ್ನು 3 ತಿಂಗಳಲ್ಲಿ 80ಲಕ್ಷ ಮಾಡಿದ ಮಾರ್ಗೊಪಾಯ ಬಹಿರಂಗಪಡಿಸಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಭ್ರಷ್ಟಾಚಾರ ರಹಿತ ಆಡಳಿತ  ನೀಡಿದ ಕೀರ್ತಿ ನಮ್ಮದಾಗಿದ್ದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದರ ಜೊತೆಯಲ್ಲಿ ರೈತರು ಸಂಕಷ್ಟಕ್ಕೆ ಧಾವಿಸಿದ ಸರ್ಕಾರ ನಮ್ಮದಾಗಿದೆ.

ರಾಜ್ಯದಲ್ಲಿ ಕಳೆದ 5ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳೇ ನಮಗೆ ಶ್ರೀರಕ್ಷೆಯಾಗಲಿದ್ದು ರಾಜ್ಯದಲ್ಲಿ ಮುಂಬರುವ ಸರ್ಕಾರವೂ ಕಾಂಗ್ರೆಸ್ ಸರ್ಕಾರ ಬರಲಿದ್ದು ಇನ್ನೂ ಉತ್ತಮ ರೀತಿಯ ಆಡಳಿತ ನೀಡುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ, ರವಿ ಬೋಸರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ