ಭಾರತ ಮತ್ತು ಶ್ರೀಲಂಕಾ ನಡುವೆ ಜಲಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಮತ್ತಷ್ಟು ತೀವ್ರ

NYT2009073004051935C

ರಾಮೇಶ್ವರಂ, ಫೆ.11- ಭಾರತ ಮತ್ತು ಶ್ರೀಲಂಕಾ ನಡುವೆ ಜಲಗಡಿಯಲ್ಲಿ ಉದ್ಭವಿಸಿರುವ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.
ದ್ವೀಪರಾಷ್ಟ್ರ ಸಾಗರ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ ಸುಮಾರು 3000 ಬೆಸ್ತರನ್ನು ಶ್ರೀಲಂಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ಬೆದರಿಸಿ ಓಡಿಸಿದ್ದಾರೆ ಎಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಚ್ಚಾತಿವು ಪ್ರದೇಶದಲ್ಲಿ 460 ಯಾಂತ್ರೀಕೃತ ದೋಣಿಗಳೊಂದಿಗೆ ಸುಮಾರು 3000 ಬೆಸ್ತರು ಮೀನುಗಾರಿಕೆಯಲ್ಲಿ ತೊಡಗಿದ್ದರು. ಆಗ ಸ್ಥಳಕ್ಕೆ ದಾವಿಸಿದ ಲಂಕಾ ನೌಕಾಪಡೆ ಸಿಬ್ಬಂದಿ ಬಲೆಗಳನ್ನು ಹರಿದು ಹಾಕಿ ಬೆಸ್ತರನ್ನು ಬೆದರಿಸಿ ಆ ಪ್ರದೇಶದಿಂದ ಅಟ್ಟಿದರು. ಮೀನುಗಾರಿಕೆ ನಡೆಸದೆ ಬೆಸ್ತರು ಹಿಂದಿರುಗಬೇಕಾಯಿತು ಎಂದು ಇಲಾಖೆ ಸಹಾಯಕ ನಿರ್ದೇಶಕ ಮಣಿಕಂದನ್ ತಿಳಿಸಿದ್ದಾರೆ.
ಫೆ.6ರಂದು ಇದೇ ಪ್ರದೇಶದಲ್ಲಿ 1500ಕ್ಕೂ ಹೆಚ್ಚು ತಮಿಳುನಾಡು ಬೆಸ್ತರನ್ನು ಇದೇ ರೀತಿ ಬೆದರಿಸಿ ವಾಪಸ್ ಕಳುಹಿಸಲಾಗಿತ್ತು.

ಫೋಟೋ ಕ್ರೆಡಿಟ್: asianews.it(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ