ಅರಣ್ಯಾಧಿಕಾರಿಗಳ ತಂಡ ಗೂಬೆ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ

ಚಿಂತಾಮಣಿ, ಫೆ.11- ಶಿಡ್ಲಘಟ್ಟ ಮತ್ತು ಚಿಂತಾಮಣಿ ವಲಯ ಅರಣ್ಯಾಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಗೂಬೆ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಿ ಅವರಿಂದ ಮೂರು ಗೂಬೆ ಎರಡು ದ್ವಿಚಕ್ರವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೂಬೆ ಮಾರಾಕ್ಕೆ ಯತ್ನಿಸಿ ಸಿಕ್ಕಬಿದ್ದಿರುವುವರನ್ನು ಶಿಡ್ಲಘಟ್ಟ ತಾಲೂಕಿನ ಗಂಜಿ ಗುಂಟೆ ಸಮೀಪದ ಹಕ್ಕಿ ಪಿಕ್ಕಿ ಕಾಲೋನಿಯ ನಿವಾಸಿಗಳಾದ ಪ್ರಸಾದ್, ಚಂದ್ರಮೋಹನ್ ಮತ್ತು ಬಾಳೇಗೌಡ ನಹಳ್ಳಿಯ ಮಲ್ಲಯ್ಯ ಎಂದು ಗುರುತಿಸಲಾಗಿದೆ ಎಂದರು.

ಅರೋಪಿಗಳು ಗೂಬೆಗಳನ್ನು ಹಿಡಿದು ಮಾರಾಟ ಮಾಡುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಚಿಂತಾಮಣಿ ಮತ್ತು ಶಿಡ್ಲಘಟ್ಟದ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಅವರನ್ನು ಬಂಧಿಸಿದೆ ಎಂದು ತಿಳಿಸಿದರು.

ವನ್ಯ ಪ್ರಾಣಿ ಪಕ್ಷಿಗಳ ಸಂರಕ್ಷಣ ಕಾಯ್ದೆಯಡಿ ಅರೋಪಿಸಗಳ ವಿರುದ್ದ ಪ್ರಕರಣವನ್ನು ದಾಖಲು ಮಾಡಿ ನ್ಯಾಯಾಲಯದಲ್ಲಿ ಹಾಜರುಪಡಿದ್ದು , ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಅದೇಶಿಸಿದ್ದಾರೆ ಎಂದರು.

ತಂಡದಲ್ಲಿ ಎ.ಸಿ.ಎಪ್. ಚಂದ್ರಶೇಖರಯ್ಯ, ಅರ್.ಎಫ್.ಓ. ಎಚ್.ಚಿನ್ನಪ್ಪಯ ನೇತೃತ್ವದಲ್ಲಿ ಡಿಅರ್‍ಎಪ್‍ಗಳಾದ ಜಯಚಂದ್ರ, ರಾಮಾಂಜನೇಯ, ಜೆ.ಅರ್.ಶ್ರೀನಿವಾಸ್ ಅನಿಲ್‍ಕುಮಾರ್, ರೂಪಾ, ಚಂದರ, ಅರಣ್ಯ ರಕ್ಷಕರಾದ ಲೋಕೇಶ್, ವಿಶ್ವ ನಾಥ್, ರಾಮಾಂಜಿನಾಥ್, ಶ್ರೀನಿವಾಸ್ ರವಿಕುಮಾರ್, ಸುಬ್ರಹ್ಮಮಣಿ ಮಣಿ ಕಂಠ, ವೆಂಕಟರವಣ ಮತ್ತಿತರರು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಅಭಿನಂದಿಸಿದರು.

ಫೋಟೋ ಕ್ರೆಡಿಟ್: birdnote.org (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ