ನವದೆಹಲಿ,ಫೆ.11- ಭಾರತೀಯ ಅಂಚೆ ಇಲಾಖೆ ಏಪ್ರಿಲ 1 ರಿಂದ ಪೇಮೆಂಟ್ಸ್ ಬ್ಯಾಂಕ್ ಸೇವೆಯನ್ನು ಆರಂಭಿಸಲಿದ್ದು , ಇಲಾಖೆಯಿಂದ ದೇಶಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳೂ ಮತ್ತು ಪೇಮೆಂಟ್ಸ್ ಬ್ಯಾಂಕ್ ಶಾಖೆಗಳಲ್ಲಿ ಪೇಮೆಂಟ್ಸ್ ಬ್ಯಾಂಕ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
2017ರ ಜನವರಿಯಲ್ಲಿ ಈ ಸೇವೆಯನ್ನು ಪ್ರಾಯೋಗಿಕವಾಗಿ ರಾಂಚಿ, ರಾಯ್‍ಪುರದಲ್ಲಿ ಆರಂಭಿಸಲಾಗಿತ್ತು. ಏಪ್ರಿಲï 1ರಿಂದ ಅಂಚೆಕಚೇರಿಯ 17 ಕೋಟಿ ಉಳಿತಾಯ ಖಾತೆದಾರರಿಗೆ ಬಿಲï ಪಾವತಿಯ ಸೇವೆಗಳು ಸಿಗಲಿವೆ.
ಇನ್ನು ಗ್ರಾಮೀಣ ಅಂಚೆ ಸೇವಕರು ಮತ್ತು ಪೆÇೀಸ್ಟ್‍ಮನ್‍ಗಳಿಗೆ ಪೇಮೆಂಟ್ಸ್ ಸೇವೆ ನೀಡುವ ಸಾಧನ ನೀಡಲಾಗುತ್ತಿದ್ದು, ಇದರಿಂದ ಮನೆ ಬಾಗಿಲಲ್ಲೇ ಡಿಜಿಟಲï ಪಾವತಿ ಸೇವೆ ಗ್ರಾಹಕರಿಗೆ ಲಭ್ಯವಾಗಲಿದೆ.
ಫೋಟೋ ಕ್ರೆಡಿಟ್: wikipedia.org (ಪ್ರಾತಿನಿಧ್ಯಕ್ಕಾಗಿ ಮಾತ್ರ)