ನ್ಯಾಯಾಧೀಶ ನೇಮಕಕ್ಕಾಗಿ ಕರ್ನಾಟಕ ಸೇರಿದಂತೆ ದೇಶದ 13 ಹೈಕೋರ್ಟ್‍ಗಳು ಸಲ್ಲಿಸಿರುವ 123 ಶಿಫಾರಸುಗಳು ಬಾಕಿ ಉಳಿದಿದೆ

ನವದೆಹಲಿ, ಫೆ.11-ನ್ಯಾಯಾಧೀಶ ನೇಮಕಕ್ಕಾಗಿ ಕರ್ನಾಟಕ ಸೇರಿದಂತೆ ದೇಶದ 13 ಹೈಕೋರ್ಟ್‍ಗಳು ಸಲ್ಲಿಸಿರುವ 123 ಶಿಫಾರಸುಗಳು ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ಮಂಡಳಿ-ಕೊಲಿಜಿಯಂ ಮುಂದೆ ಇತ್ಯರ್ಥಕ್ಕೆ ಬಾಕಿ ಉಳಿದಿದೆ.
ದೇಶದ 24 ಹೈಕೋರ್ಟ್‍ಗಳಲ್ಲಿರುವ ಒಟ್ಟು 1,049 ಸಾಮಥ್ರ್ಯದಲ್ಲಿ 403 ನ್ಯಾಯಾಧೀಶರ ನೇಮಕಾತಿಗಾಗಿ ಕೊಲಿಜಿಯಂ ಅಂತಿಮ ನಿರ್ಧಾರವನ್ನು ಇದೇ ವೇಳೆ ಎದುರು ನೋಡುತ್ತಿದೆ.

ಮತ್ತೊಂದೆಡೆ ತೆರವಾಗಿರುವ 280 ಹುದ್ದೆಗಳಿಗಾಗಿ ಸೂಕ್ತ ಹೆಸರುಗಳನ್ನು ಕೆಲವು ಹೈಕೋರ್ಟ್‍ಗಳನ್ನು ಇನ್ನೂ ನೀಡಿಲ್ಲ ಎಂಬುದನ್ನು ಅಂಕಿ-ಅಂಶಗಳು ತಿಳಿಸುತ್ತವೆ.

ಹೈಕೋರ್ಟ್‍ಗಳು ಸರ್ಕಾರ ಮತ್ತು ಸುಪ್ರೀಂಕೋರ್ಟ್ ಕೊಲಿಜಿಯಂಗೆ 123 ಶಿಪಾರಸುಗಳನ್ನು ಸಲ್ಲಿಸಿದೆ. ಸರ್ಕಾರಕ್ಕೆ 80 ಮತ್ತು ಕೊಲಿಜಿಯಂಗೆ 43 ಹೆಸರುಗಳನ್ನು ಸೂಚಿಸಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾನೂನು ಸಚಿವಾಲಯದ ಇತ್ತೀಚಿನ ಅಂಕಿ-ಅಂಶ ಮಾಹಿತಿ ಪ್ರಕಾರ, ಫೆ.1ರವರೆಗೆ ಅಲಹಾಬಾದ್ ಹೈಕೋರ್ಟ್‍ನಲ್ಲಿ ಗರಿಷ್ಠ 56 ಹುದ್ದೆಗಳು ಖಾಲಿ ಇವೆ. ನಂತರ ಕಲ್ಕತ(39), ಕರ್ನಾಟಕ(38), ಪಂಜಾಬ್ ಮತ್ತು ಹರಿಯಾಣ(35) ಹಾಗೂ ಆಂಧ್ರಪ್ರದೇಶ/ತೆಲಂಗಾಣ ಹೈಕೋರ್ಟ್(30) ನಂತರದ ಸ್ಥಾನದಲ್ಲಿವೆ.

ಫೋಟೋ ಕ್ರೆಡಿಟ್: ndtv.com(ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ