ವಧುವಿನ ಅಲಂಕಾರ ಮಾಡಬೇಕೆಂದು ಬ್ಯೂಟೀಷಿಯನ್ ಮೇಲೆ ಸಾಮೂಹಿಕ ಅತ್ಯಾಚಾರ

ಲೂಧಿಯಾನ, ಫೆ.11-ವಧುವಿನ ಅಲಂಕಾರ ಮಾಡಬೇಕೆಂದು ಬ್ಯೂಟೀಷಿಯನ್ ಒಬ್ಬರನ್ನು ಕಾರಿನಲ್ಲಿ ಕರೆದೊಯ್ದ ನಾಲ್ವರು ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಪ್ರಾಣ ಬೆದರಿಕೆ ಹಾಕಿರುವ ಘಟನೆ ಪಂಜಾಬ್‍ನ ಲೂಧಿಯಾನದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಪರಿಚಿತರಿಂದಲೇ ಈ ಕೃತ್ಯ ನಡೆದಿದ್ದು, ನಾಲ್ವರು ಆರೋಪಿಗಳಿಗಾಗಿ ಪೆÇಲೀಸರು ಬಲೆ ಬೀಸಿದ್ದಾರೆ.
ಚಲಿಸುತ್ತಿರುವ ಕಾರಿನಲ್ಲೇ ಒಬ್ಬರ ನಂತರ ಮತ್ತೊಬ್ಬರು ಸಾಮೂಹಿಕ ಅತ್ಯಾಚಾರ ಎಸಗಿ ಜಲಂಧರ್ ಬೈಪಾಸ್ ಬಳಿ ಯುವತಿಯನ್ನು ತಳ್ಳಿ ಪರಾರಿಯಾಗಿದ್ದಾರೆ.

ಫೋಟೋ ಕ್ರೆಡಿಟ್: thenewsminute.com (ಪ್ರಾತಿನಿಧ್ಯಕ್ಕಾಗಿ ಮಾತ್ರ)

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ