ನವದೆಹಲಿ, ಏ.13-ವಿಧಾನಸಭೆ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮೇಲುಗೈ ಸಾಧಿಸಿದ್ದಾರೆ.
ಗೆಲುವನ್ನು ಮಾನದಂಡವಾಗಿರಿಸಿಕೊಂಡು ಹಲವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ಪುತ್ರ ಡಾ.ಯತೀಂದ್ರ ವರುಣಾದಿಂದ ಟಿಕೆಟ್ ಕೊಡಿಸುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ. ಅದೇ ರೀತಿ ಸಿ.ವಿ.ರಾಮನ್‍ನಗರದಿಂದ ತಮ್ಮ ಆಪ್ತಮಿತ್ರ ಮಹದೇವಪ್ಪ ಅವರಿಗೆ ಟಿಕೆಟ್ ಹಾಗೂ ಟಿ.ನರಸೀಪುರದಿಂದ ಸುನೀಲ್‍ಬೋಸ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ಮೇಲುಗೈ ಸಾಧಿಸಿದ್ದಾರೆ.
ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ, ಅವರ ಪುತ್ರಿಯರಿಬ್ಬರಿಗೂ ಟಿಕೆಟ್ ದೊರೆತಿದೆ. ಕೆ.ಎಚ್.ಮುನಿಯಪ್ಪ ಅವರ ಪುತ್ರಿ ಅವರಿಗೆ ಕೆಜಿಎಫ್‍ನಿಂದ, ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯರೆಡ್ಡಿಗೆ ಜಯನಗರದಿಂದ ಟಿಕೆಟ್ ದೊರೆತಿದೆ.
ತೀವ್ರ ವಿರೋಧದ ನಡುವೆಯೂ ಈ ನಾಲ್ವರು ಮಕ್ಕಳಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಹೈಕಮಾಂಡ್ ಜೊತೆ ಚರ್ಚಿಸುವ ಸಂದರ್ಭದಲ್ಲಿ ನಮಗೆ ಗೆಲುವಷ್ಟೇ ಮಾನದಂಡ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.