ಬೆಂಗಳೂರು, ಏ.12- ನಗರದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಕಡೆ ಮಹಿಳೆಯರ ಸರಗಳ ಅಪಹರಣ ನಡೆಯುತ್ತಲೇ ಇದ್ದು, ಪೆÇಲೀಸರ ಭಯವಿಲ್ಲದೆ ಸರಗಳ್ಳರು ಎಗ್ಗಿಲ್ಲದೆ ರಾಜಾರೋಷವಾಗಿ ಸರ ಅಪಹರಿಸುತ್ತಿರುವುದರಿಂದ ಮಹಿಳೆಯರು ಆತಂಕಗೊಂಡಿದ್ದಾರೆ.
ನಿನ್ನೆ ರಾತ್ರಿ ಎರಡು ಕಡೆ ಸರಗಳ್ಳರು ಇಬ್ಬರು ಮಹಿಳೆಯರ ಸರಗಳನ್ನು ಅಪಹರಿಸಿದ್ದಾರೆ.
ಗಿರಿನಗರ: ಬಸ್ ನಿಲ್ದಾಣ ಸಮೀಪ ವಾಯುವಿಹಾರ ಮಾಡುತ್ತಿದ್ದ ಮಹಿಳೆಯ ಹಿಂಬಾಲಿಸಿ ಬಂದ ಇಬ್ಬರು ಸರಗಳ್ಳರು 70 ಗ್ರಾಂ ಸರ ಎಗರಿಸಿದ್ದಾರೆ.
ರಾತ್ರಿ 10.30ರ ಸಮಯದಲ್ಲಿ ಮಾಲತಿ ಎಂಬುವವರು ಹೊಸಕೆರೆಹಳ್ಳಿ ಬಸ್ ನಿಲ್ದಾಣದ ಸಮೀಪ ವಾಯುವಿಹಾರ ಮಾಡುತ್ತಿದ್ದಾಗ ಇಬ್ಬರು ಸರಗಳ್ಳರು ಬೈಕ್‍ನಲ್ಲಿ ಹಿಂದಿನಿಂದ ಬಂದು 70 ಗ್ರಾಂ ಸರ ಎಗರಿಸಿದ್ದಾರೆ.
ತಕ್ಷಣ ಸಹಾಯಕ್ಕಾಗಿ ಕೂಗಿಕೊಂಡರಾದರೂ ದಾರಿಹೋಕರು ಸಹಾಯಕ್ಕೆ ಬರುವಷ್ಟರಲ್ಲಿ ಸರಗಳ್ಳರು ಕಣ್ಮರೆಯಾಗಿದ್ದರು.
ವರ್ತೂರು: ಮದುವೆಯ ಆಮಂತ್ರಣ ಪತ್ರಿಕೆ ಕೊಡಲು ನೆಂಟರ ಮನೆಗೆ ನಡೆದು ಹೋಗುತ್ತಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿ ಬಂದ ಸರಗಳ್ಳ 50 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾನೆ.
ಕೋರಮಂಗಲ ನಿವಾಸಿ ಇಂದಿರಾ ಎಂಬುವವರು ರಾತ್ರಿ 7.15ರಲ್ಲಿ ಗುಂಜೂರು ಗ್ರಾಮದಲ್ಲಿ ನೆಂಟರ ಮನೆಗೆಂದು ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಸರಗಳ್ಳ ಕೊರಳಿಗೆ ಕೈ ಹಾಕಿ ಸರ ಎಳೆದುಕೊಂಡು ಪರಾರಿಯಾಗಿದ್ದಾನೆ.
ಈ ಎರಡೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡು ಸರಗಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.