ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಬೈಕ್ ಕಳ್ಳನನ್ನು ಆಡುಗೋಡಿ ಪೆÇಲೀಸರು ಬಂಧಿಸಿ 12 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶ

ಬೆಂಗಳೂರು, ಏ.12- ನಗರದ ವಿವಿಧ ಕಡೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಬೈಕ್ ಕಳ್ಳನನ್ನು ಆಡುಗೋಡಿ ಪೆÇಲೀಸರು ಬಂಧಿಸಿ 12 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ವಿನಾಯಕ ನಗರದ 3ನೆ ಕ್ರಾಸ್ ನಿವಾಸಿ ಸಲೀಂಪಾಷ (19) ಬಂಧಿತ ಆರೋಪಿ.
ನಗರದ ಮನೆಗಳ ಮುಂದೆ ಹಾಗೂ ಪಾರ್ಕಿಂಗ್ ಸ್ಥಳಗಳಲ್ಲಿ ನಿಂತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಈತ ಕಳ್ಳತನ ಮಾಡಿದ್ದ 6 ಬಜಾಜ್ ಪಲ್ಸರ್, 3 ಟಿವಿಎಸ್ ಅಪಾಚಿ, 3 ಯಮಹ ಆರ್‍ಎಕ್ಸ್, 4 ಹೋಂಡಾ ಆ್ಯಕ್ಟೀವಾ, 1 ಸ್ಪ್ಲೆಂಡರ್ ಪ್ಲಸ್, 1 ಬಜಾಜ್ ಸಿಟಿ, 1ಹೋಂಡಾ ಸಿಡಿ ಡಾನ್ ಹಾಗೂ ಟಿವಿಎಸ್ ಎಕ್ಸೆಲ್ ಸೇರಿ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಈತ ಆಡುಗೋಡಿ, ಅಶೋಕನಗರ, ವಿಲ್ಸನ್‍ಗಾರ್ಡನ್, ಉಪ್ಪಾರಪೇಟೆ, ಚಂದ್ರಾ ಲೇಔಟ್, ಪರಪ್ಪನ ಅಗ್ರಹಾರ, ವಿವೇಕನಗರ, ಬಸವನಗುಡಿ, ಬನಶಂಕರಿ ವ್ಯಾಪ್ತಿಗಳಲ್ಲಿ ವಾಹನಗಳನ್ನು ಕಳ್ಳತನ ಮಾಡಿದ್ದು, ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ