ಪೀಣ್ಯ: ಚನ್ನನಾಯಕನಹಳ್ಳಿಯ ನಾಗಸಂದ್ರದ ನಿವಾಸಿ ರತ್ನಮ್ಮ ಎಂಬುವರು ರಾತ್ರಿ 10 ಗಂಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ಸರಗಳ್ಳರು ಇವರ ಕೊರಳಲಿದ್ದ 40 ಗ್ರಾಂ ತೂಕದ ಮಾಂಗಲ್ಯ ಸರ ಎಗರಿಸಿ ಪರಾರಿಯಾಗಿದ್ದಾರೆ.
ಅನ್ನಪೂಣೇಶ್ವರಿ ನಗರ:
ಬಿ ಗ್ರೂಪ್ ಲೇಔಟ್ನ ಅಗಸ್ತ್ಯ ಶಾಲೆ ಸಮೀಪದ ನಿವಾಸಿ ಶಾಂತ ಎಂಬುವರು ರಾತ್ರಿ 9.15ರಲ್ಲಿ ಮನೆ ಮುಂದೆ ನಿಂತಿದ್ದಾಗ ಬೈಕ್ನಲ್ಲಿ ಬಂದ ಸರಗಳ್ಳರ ಪೈಕಿ ಒಬ್ಬಾತ ಇವರ ಕೊರಳಲಿದ್ದ 55 ಗ್ರಾಂ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಆಯಾಯ ಠಾಣೆ ಪೆÇಲೀಸರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಜಯಪುರ, ಏ.9- ಕಾರಿನ ಡಿಕ್ಕಿಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಕೆಲ ವಸ್ತುಗಳ ಜತೆ ಹಣ ಸಾಗಿಸುತ್ತಿದ್ದನ್ನು ಪತ್ತೆ ಹಚ್ಚಿರುವ ಚುನಾವಣಾ ವಿಚಕ್ಷಣಾ ದಳ ಅಧಿಕಾರಿಗಳು ಸುಮಾರು 4.80 ಲಕ್ಷ ರೂ.ನ್ನು ವಶಕ್ಕೆ ಪಡೆದಿದ್ದಾರೆ.
ವಿಜಯಪುರ ನಗರದ ಅಥಣಿ ರಸ್ತೆಯಲ್ಲಿ ಕಾರೊಂದನ್ನು ತಡೆದು ಪರಿಶೀಲನೆ ನಡೆಸಿದಾಗ ಅದರಲ್ಲಿದ್ದವರು ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದ್ದಾರೆ.
ತಕ್ಷಣ ಕಾರನ್ನು ಸಂಪೂರ್ಣ ತಪಾಸಣೆಗೊಳಪಡಿಸಿದಾಗ ಅಕ್ರಮವಾಗಿ ಹಣ ಸಾಗಣೆ ಮಾಡುತ್ತಿದ್ದುದು ಗೊತ್ತಾಗಿದೆ.
ಚುನಾವಣಾಧಿಕಾರಿ ಡಾ.ಆನಂದ ದೇವರನಾವದಗಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು , ಕಾರು ಹಾಗೂ ಹಣವನ್ನು ಜಪ್ತಿ ಮಾಡಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಗಾಂಧಿ ಚೌಕ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.